![]()
ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಂದಿನಿಂದ ಶಶಿಧರ್ ಶೆಟ್ಟಿ ನವಶಕ್ತಿ ಬರೋಡ ಇವರ ನೇತೃತ್ವದಲ್ಲಿ ಅದ್ದೂರಿಯ ಬ್ರಹ್ಮಕಲಶೋತ್ಸವ ನೆರವೇರಲಿದೆ.ಈಗಾಗಲೇ ಸಂಭ್ರಮದ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆಗಳು ಪೂರ್ಣಗೊಂಡಿದೆ. ಇಂದು ಸಂಜೆ ಹೊರೆ ಕಾಣಿಕೆಯ ಭವ್ಯ ಮೆರವಣಿಗೆಯು ಮದ್ದಡ್ಕದಿಂದ ದೇವಸ್ಥಾನಕ್ಕೆ ಸಾಗಲಿದೆ. ದೇವಸ್ಥಾನಕ್ಕೆ ಸಂಬಂಧಪಟ್ಟ ಪಡಂಗಡಿ, ಕುವೆಟ್ಟು, ಸೋಣಂದೂರು, ಓಡಿಲ್ನಾಳ, ಗ್ರಾಮದಿಂದ ಹಸಿರು ವಾಣಿ ಹೊರೆ ಕಾಣಿಕೆ ಮದ್ದಡ್ಕ ಶ್ರೀ ರಾಮ ಭಜನಾ ಮಂದಿರಕ್ಕೆ ಬಂದು ಅಲ್ಲಿಂದ ಸುಮಾರು ಒಂದು ಸಾವಿರಕ್ಕಿಂತಲೂ ಅಧಿಕ ಮಕ್ಕಳಿಂದ ನೃತ್ಯ ಭಜನೆಯ ಮೂಲಕ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.ಸಂಜೆ 4 ಗಂಟೆಗೆ ಶ್ರೀಮತಿ ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಕುಟುಂಬಸ್ಥರು ಕೊಡುಗೆ ನೀಡಿದ ನೂತನ ಮಹಾದ್ವಾರವನ್ನು ಮಾತೃಶ್ರೀ ಶ್ರೀಮತಿ ಕಾಶಿ ಶೆಟ್ಟಿ ನವಶಕ್ತಿ ಉದ್ಘಾಟಿಸಲಿದ್ದಾರೆ.
5 ಗಂಟೆಗೆ ಉಗ್ರಾಣ ಮಹೂರ್ತ ಉದ್ಘಾಟನೆಯನ್ನು ಶಿವಶಂಕರ್ ನಾಯಕ್ ನೆರವೇರಿಸಲಿದ್ದಾರೆ.ರಾತ್ರಿ 7.30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮವು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಶಿಧರ್ ಶೆಟ್ಟಿ ನವಶಕ್ತಿ ಬರೋಡ ಸಭಾಧ್ಯಕ್ಷತೆಯಲ್ಲಿ ನಡೆಯಲಿದೆ. ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀ ಧಾಮ ಮಾಣಿಲ ಆಶೀರ್ವಚನ ನೀಡಲಿದ್ದಾರೆ.ಸಭಾ ಕಾರ್ಯಕ್ರಮವನ್ನು ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ್ ಅಜಿಲರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರತಾಪ್ ಸಿಂಹ ನಾಯಕ್, ಹರೀಶ್ ಕುಮಾರ್, ಪ್ರಭಾಕರ ಬಂಗೇರ, ತಹಶೀಲ್ದಾರ್ ಪ್ರಥ್ವಿಸಾನಿಕಂ, ವಿಜಯ ಶೆಟ್ಟಿ ಪಣಕಜೆ ಮುಂಬಾಯಿ, ಸುಮಂತ್ ಕುಮಾರ್ ಜೈನ್, ಮೋಹನ್ ಕುಮಾರ್ ಲಕ್ಷ್ಮೀ ಗ್ರೂಪ್ಸ್ ಉಜಿರೆ, ಪ್ರಶಾಂತ್ ಸುವರ್ಣ, ಶೇಖರ್ ಶೆಟ್ಟಿ ಉದ್ಯಮಿಗಳು ಮಯೂರ ಗುರುವಾಯನಕೆರೆ, ಪುನೀತ್ ಕುಮಾರ್, ಅತುಲ್ ಬಂಗೇರ ಹಲೇಜಿ, ದಿನೇಶ್ ಶೆಟ್ಟಿ ಉದ್ಯಮಿ ಪುಣೆ, ಬಸವನ ಗೌಡ ಮಾನ್ವಿ ಬಸವೇಶ್ವರ ರೈಸ್ ಮಿಲ್ ರಾಯಚೂರು, ಬಾಲಕೃಷ್ಣ ಶೆಟ್ಟಿ ಕಾರ್ಯಾಣ,ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಭಾಗವಹಿಸಲಿದ್ದಾರೆ. ನಂತರ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ.