ಬೆಳ್ತಂಗಡಿ: ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮದಿನಾಚರಣಾ ಸಮಿತಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ವರ್ಷದ ಜನ್ಮದಿನಾಚರಣೆಯ ಪ್ರಯುಕ್ತ ಏ.14ರಂದು ಬೆಳ್ತಂಗಡಿ ತಾಲೂಕಿನ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಪರಿಶಿಷ್ಟ ಜಾತಿ ಭಾಂದವರಿಗೆ ರಾಜ್ಯ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ಈ ಸ್ಪರ್ಧೆ ಹಾಗೂ ಕ್ರೀಡಾಕೂಟ ನಡೆಯಲಿದ್ದು,
ಪುರುಷರಿಗೆ: ಹಗ್ಗಜಗ್ಗಾಟ, ಸೂಪರ್ ಸಿಕ್ಸ್ ಕ್ರಿಕೆಟ್, ಕಬಡ್ಡಿ, ವಾಲಿಬಾಲ್ ಪಂದ್ಯಾಟ,
ಮಹಿಳೆಯರಿಗೆ : ಹಗ್ಗಜಗ್ಗಾಟ, ಕಬಡ್ಡಿ ಪಂದ್ಯಾಟ, ತ್ರೋಬಾಲ್,
ಪ್ರೌಡ ಶಾಲಾ ಬಾಲಕರಿಗೆ: ಕಬಡ್ಡಿ ಪಂದ್ಯಾಟವನ್ನು ಆಯೋಜಿಸಲಾಗಿದೆ. ಜೊತೆಗೆ 100ಮೀ ಓಟ, ಲಿಂಬೆ ಚಮಚ ಓಟ, ಸ್ಟಿಕ್ಕರ್ ಅಂಟಿಸುವುದು, ಬಾಟಲಿಗೆ ನೀರು ತುಂಬಿಸುವುದು, ಹಾಗೂ ಇನ್ನೀತರ ಆಟೋಟ ಸ್ಪರ್ಧೆಗಳು ನಡೆಯಲಿದೆ.
ಸಾಂಸ್ಕೃತಿಕ ಸ್ಪರ್ಧೆ
ಚಳುವಳಿ ಗೀತೆಗಳು (ಬೆಳಗ್ಗೆ 11ರಿಂದ)
ಸಮಯಾವಕಾಶ: 4+1 ಒಟ್ಟು 5 ನಿಮಿಷ , ಒಂದು ಗುಂಪಿನಲ್ಲಿ ಕನಿಷ್ಠ 3ರಿಂದ ಗರಿಷ್ಠ 5 ಜನರಿಗೆ ಅವಕಾಶ
ಕಿರು ಪ್ರಹಸನ (ಮಧ್ಯಾಹ್ನ 2:30ರಿಂದ)
ಸಮಯಾವಕಾಶ: 10+5 ಒಟ್ಟು 15 ನಿಮಿಷ ಒಂದು ಗುಂಪಿನಲ್ಲಿ ಕನಿಷ್ಠ 3ರಿಂದ ಗರಿಷ್ಠ 6 ಜನರಿಗೆ ಅವಕಾಶ
ಪ್ರಾಥಮಿಕ ಮತ್ತು ಪ್ರೌಡಶಾಲಾ ವಿಭಾಗ
ಭಾಷಣ ಸ್ಪರ್ಧೆ
ವಿಷಯ : ಬಾಬಾ ಸಾಹೇಬರ್ ಬಾಲ್ಯ ಜೀವನದ ಕುರಿತು
ಪ್ರಬಂಧ ವಿಷಯ : “ಬಾಬಾ ಸಾಹೇಬರನ್ನು ರಾಷ್ಟç ನಾಯಕನನ್ನಾಗಿ ನಿರ್ಮಾಣ ಮಾಡುವಲ್ಲಿ ತಂದೆಯ ಪಾತ್ರ”
ಚಿತ್ರಕಲೆ : ಡಾ| ಬಿ.ಆರ್ ಅಂಬೇಡ್ಕರ್
ಕಾಲೇಜ್ ವಿಭಾಗ
ಭಾಷಣ : ಸಂವಿಧಾನ ರಚನೆಯಲ್ಲಿ ಬಾಬಾ ಸಾಹೇಬರ ಪ್ರಾಮುಖ್ಯತೆ
ಪ್ರಬಂಧ ವಿಷಯ : ಭಾರತದಲ್ಲಿ ಪ್ರಜಾಪ್ರಭುತ್ವ ಜಾರಿಯಾಗಲು ಬಾಬಾ ಸಾಹೇಬರ ಪಾತ್ರ
ಚಿತ್ರಕಲೆ ರಾಮ್ ಜಿ ಸಕ್ಪಾಲ್
ಸಂಜೆ 6 ಗಂಟೆಯಿಂದ ಸಮೂಹ ನೃತ್ಯ
ವಿಷಯ : ಅಂಬೇಡ್ಕರ್ ಜೀವನಾಧಾರಿತ
ಸಮಯಾವಕಾಶ 6+2 ಒಟ್ಟು 8 ನಿಮಿಷ , ಒಂದು ಗುಂಪಿನಲ್ಲಿ ಕನಿಷ್ಠ 6ರಿಂದ ಗರಿಷ್ಟ 15 ಜನರಿಗೆ ಅವಕಾಶ
ತಾಲೂಕಿನಲ್ಲಿ ಪ್ರಪಥಮ ಬಾರಿಗೆ ಪರಿಶಿಷ್ಟ ಜಾತಿ ಭಾಂದವರಿಗೆ ರಾಜ್ಯ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದ್ದು ಈಗಾಗಲೆ ರಾಜ್ಯದ ಅನೇಕ ಕ್ರೀಡಾ ತಂಡಗಳು ಹೆಸರು ನೋಂದಾಯಿಸಿದ್ದು, ಸಾಂಸ್ಕೃತಿಕ ಸ್ಪರ್ಧೆಯ ತಂಡಗಳ ಹೆಸರು ಕೂಡ ಹೆಚ್ಚಾಗುತ್ತಿದೆ. ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಹಾಗೂ ಟ್ರೋಫಿ ಲಭಿಸಲಿದ್ದು , ಕಾರ್ಯಕ್ರಮದಲ್ಲಿ ಸುಮಾರು 7 ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗುವ ನಿರೀಕ್ಷೆಯಿದೆ.
ಈಗಾಗಲೇ ಕಾರ್ಯಕ್ರಮದ ಸಿದ್ಧತೆಗಳು ನಡೆಯುತ್ತಿದ್ದು ಲೋಕಸಭಾ ಚುನಾವಣೆ 2024ರ ನೀತಿ ಸಂಹಿತೆಯನ್ನು ಪಾಲಿಸಿಕೊಂಡು ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.