ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ವಿಶೇಷ ಆಕರ್ಷಣೆಯಾಗಿ ಬ್ಯಾಟರಿ ಚಾಲಿತ ಕಾರು,ಉಚಿತ ಸಂಚಾರ:

 

 

 

ಬೆಳ್ತಂಗಡಿ: ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ 08 ರಿಂದ 16 ರವರೆಗೆ ಅದ್ದೂರಿಯಾಗಿ ಬ್ರಹ್ಮಕಲಶೋತ್ಸವ ನಡೆಯಲಿದೆ. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಶಿಧರ್ ಶೆಟ್ಟಿಯವರ ನೇತೃತ್ವದಲ್ಲಿ ಈಗಾಗಲೇ ಪೂರ್ವಸಿದ್ಧತಾ ಕಾರ್ಯಗಳು ಪ್ರಗತಿಯಲ್ಲಿ ಸಾಗುತ್ತಿದೆ. ಅವರ ಕಲ್ಪನೆಯಂತೆ ಓಡೀಲು ಬ್ರಹ್ಮಕಲಶೋತ್ಸವ ವಿಶೇಷ ರೀತಿಯಲ್ಲಿ ನಡೆಯಬೇಕು ಎಂಬ ನಿಟ್ಟಿನಲ್ಲಿ ಮದ್ದಡ್ಕದ ಕಿನ್ನಿಗೋಳಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ದ್ವಾರದ ಬಳಿಯಿಂದ ಬ್ಯಾಟರಿ ಚಾಲಿತ ಕಾರು ಅದಲ್ಲದೇ ಮಹಿಳೆಯರೇ ಚಾಲನೆ ಮಾಡುವ ರಿಕ್ಷಾಗಳು ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಉಚಿತವಾಗಿ ಸಂಚರಿಸಲಿವೆ.
ದೇವಸ್ಥಾನಕ್ಕೆ ಬರುವ ಭಕ್ತಾಧಿಗಳು ಇದರಲ್ಲಿ ಸಂಚರಿಸಬಹುದಾಗಿದೆ.

error: Content is protected !!