90ನೇ ವರ್ಷಕ್ಕೆ ಕಾಲಿಟ್ಟ ಭಾರತೀಯ ರಿಸರ್ವ್ ಬ್ಯಾಂಕ್: 90ರೂ ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ

ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಾಗಿ 90ನೇ ವರ್ಷಕ್ಕೆ ಅಡಿ ಇಟ್ಟ ಸಂತಸದ ಸಂದರ್ಭದಲ್ಲಿ ಇದರ ನೆನಪಾಗಿ 90 ರೂಪಾಯಿ ಮುಖಬೆಲೆಯ ವಿಶೇಷ ನಾಣ್ಯ ಇಂದು ಬಿಡುಗಡೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಈ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಿದರು. ಹಣಕಾಸು ಸಚಿವಾಲಯ ಅನಾವರಣಗೊಳಿಸಿದ ಈ 90 ರೂ ನಾಣ್ಯವನ್ನು 99.99 ಪ್ರತಿಶತದಷ್ಟು ಶುದ್ಧ ಬೆಳ್ಳಿಯಿಂದ ತಯಾರಿಸಲಾಗಿದೆ. ಈ ನಾಣ್ಯ 40 ಗ್ರಾಮ್ ತೂಗುತ್ತದೆ.

ಈ ಸಂದರ್ಭದಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನಾಣ್ಯದಲ್ಲಿ ಲಾಂಛನದ ಕೆಳಗೆ RBI@90 ಎಂದು ಬರೆಯಲಾಗಿದೆ. ಅಶೋಕ ಸ್ತಂಭದ ನಾಲ್ಕು ಸಿಂಹಗಳಿರುವ ಲಾಂಛನ ಇದೆ. ಅದರ ಕೆಳಗೆ ದೇವನಾಗರಿ ಲಿಪಿಯಲ್ಲಿ ಬರೆಯಲಾದ ಸತ್ಯಮೇವ ಜಯತೆ ಇದೆ. ಈ 90 ರೂ ನಾಣ್ಯವನ್ನು ವಿಶೇಷ ದಿನದ ಸ್ಮರಣೆಗಾಗಿ ತಯಾರಿಸಲಾಗಿದ್ದು ಇದು ಸಾರ್ವಜನಿಕ ಬಳಕೆಗೆ ಲಭ್ಯ ಇರುವ ಸಾಧ್ಯತೆ ಕಡಿಮೆ. ಕಾಯಿನ್ ಕಲೆಕ್ಟರ್‌ಗಳಿಗೆ ಒಂದು ಸೇರ್ಪಡೆಯಾಗಬಹುದು.

error: Content is protected !!