ಅಂಬಟೆ ಮಲೆಯಲ್ಲಿ ಅಕ್ರಮ ಮರಮಟ್ಟು ಸಂಗ್ರಹ: 7 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಅರಣ್ಯಾಧಿಕಾರಿಗಳ ವಶ

ಬೆಳ್ತಂಗಡಿ: ತಾಲೂಕಿನ ನೆರಿಯ ಗ್ರಾಮದ ಅಂಬಟೆ ಮಲೆ ಎಂಬಲ್ಲಿನ ಜೆ.ಕೆ ಖಾಸಗಿ ಎಸ್ಟೇಟ್ ನಲ್ಲಿ ಅಕ್ರಮವಾಗಿ ಮರ ಕಡಿದು ಸಂಗ್ರಹಿಸಲಾಗಿದ್ದು ಇದನ್ನು ಮಾ.26ರಂದು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕಾಯಿದೂಪ-18.386 ಘನ ಮೀಟರ್ ಹಲಸು-1.353ಘ.ಮೀ., ಹೆಬ್ಬಲಸು-20.277ಘ.ಮೀ., ಚೇರೆ-0.836ಘ.ಮೀ., ಕಾಡು ಜಾತಿ 1.235, ಸಹಿತ ಒಟ್ಟು 42.114 ಘನ ಮೀಟರ್ ಮರ ಹಾಗೂ 15,000 ಘನ ಮೀಟರ್ ಕಟ್ಟಿಗೆ ವಶಪಡಿಸಿಕೊಳ್ಳಲಾಗಿದ್ದು ಇದರ ಒಟ್ಟು ಮೌಲ್ಯ 7,02,276ರೂ. ಎಂದು ಅಂದಾಜಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಾರೆಂಕಿ ಗ್ರಾಮದ ಕೊಲ್ಪೆದಬೈಲು ನಜೀರ್, ಬಿದ್ರೆ ಗ್ರಾಮದ ಮೊಹಮ್ಮದ್ ರಫೀಕ್, ಮಂಗಳೂರು ಬಂದರ್‌ನ ಭರತ್ ಕುಮಾರ್ ಕೊಠಾರಿ ಹಾಗೂ ಎಸ್ಟೇಟ್ ಮ್ಯಾನೇಜರ್ ಗಂಡಿಬಾಗಿಲಿನ ವಿನು ಎಂಬವರನ್ನು ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು ಬಳಿಕ ಜಾಮೀನಿನ ಆಧಾರದ ಮೇಲೆ ಬಿಡುಗಡೆಗೊಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಎಸಿಎಫ್ ಶ್ರೀಧರ್ ಪಿ., ಬೆಳ್ತಂಗಡಿ ಆರ್ ಎಫ್ ಒ ಮೋಹನ್ ಕುಮಾರ್ ಬಿ.ಜಿ.,ಡಿ ಆರ್ ಎಫ್ ಒ ಯತೀಂದ್ರ ಹಾಗೂ ಸಂತೋಷ್ ಪಾಲ್ಗೊಂಡಿದ್ದರು.

error: Content is protected !!