ತುಮಕೂರು,ಸುಟ್ಟು ಕರಕಲಾದ ರೀತಿಯಲ್ಲಿ ಮೂವರ ಶವ ಕಾರಿನೊಳಗೆ ಪತ್ತೆ: ಬೆಳ್ತಂಗಡಿ ಮೂಲದವರೆಂಬ ಮಾಹಿತಿ: ಕೊಲೆಗೈದು ಕಾರಿನೊಳಗೆ ಹಾಕಿ ಬೆಂಕಿ ಕೊಟ್ಟಿರುವ ಶಂಕೆ:

 

 

ಬೆಳ್ತಂಗಡಿ : ತುಮಕೂರಿನ‌ ಕುಚ್ಚಂಗಿ ಕೆರೆಯಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೂವರ ಮೃತ ದೇಹ ಪತ್ತೆಯಾಗಿದೆ.

ಕೆರೆ ಸಂಪೂರ್ಣ ಬತ್ತಿ ಹೋಗಿದ್ದು, ಇದರ ಮಧ್ಯ ಭಾಗದಲ್ಲಿ ಕಾರು ಕೂಡ ಸುಟ್ಟು ಕರಕಲಾಗಿದೆ.
ಕಾರೊಂದರಲ್ಲಿ ಮೂವರು ವ್ಯಕ್ತಿಗಳ ಸುಟ್ಟ ಶವ ಪತ್ತೆ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ಫೋರೆನ್ಸಿಕ್ ತಜ್ಞರ ತಂಡ ಕೂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು,

ಕಾರಿನ ನಂಬರ್ ಕೂಡ ಪತ್ತೆಯಾಗಿದ್ದು, ಇದರ ಮೂಲಕ ಸುಟ್ಟು ಕರಕಲಾಗಿರುವ ಶವಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಅವರು ತಿಳಿಸಿದ್ದಾರೆ. ಈ ಸಂಬಂಧ ಕೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಾಹಿತಿ ಪ್ರಕಾರ ಬೆಳ್ತಂಗಡಿ ಮೂಲದವರೆನ್ನಲಾಗಿದ್ದು  ಯಾರೋ ಕೊಲೆಗೈದು ಕಾರಿನೊಳಗೆ ಹಾಕಿ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ.

 

 

error: Content is protected !!