ನಿಡ್ಲೆ ,ಅಕ್ರಮ ವೈನ್ ಮಾರಾಟ: ಬೆಳ್ತಂಗಡಿ ಅಬಕಾರಿ ಇಲಾಖೆ ದಾಳಿ: ₹ 2ಲಕ್ಷ ಮೌಲ್ಯದ 306 ಲೀಟರ್ ವೈನ್ ವಶಕ್ಕೆ:

 

 

ಬೆಳ್ತಂಗಡಿ : ಅಕ್ರಮವಾಗಿ ವೈನ್ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಬೆಳ್ತಂಗಡಿ ಅಬಕಾರಿ ದಳ ದಾಳಿ ನಡೆಸಿದೆ.

ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಜಿತೇಂದ್ರ ಜೈನ್ ಎಂಬವರ ಮಾಲೀಕತ್ವದ ವರ್ಧಮಾನ್ ಸ್ಟೋರ್ ನಲ್ಲಿ ನಿಷೇಧಿತ ಹೋಮ್ ಮೇಡ್ ವೈನ್ ನನ್ನು ಹೊರ ಜಿಲ್ಲೆಯಿಂದ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳ್ತಂಗಡಿ ಅಬಕಾರಿ ದಳದ ಇನ್ಸ್ಪೆಕ್ಟರ್ ಲಕ್ಷ್ಮಣ್ ಉಪ್ಪಾರ್ ಮತ್ತು ತಂಡ ಮಾ.20 ರಂದು ಸಂಜೆ 4 ಗಂಟೆಗೆ ದಾಳಿ ನಡೆಸಿದೆ.ದಾಳಿ ವೇಳೆ ಮಾರಾಟ ಮಾಡಲು ದಾಸ್ತಾನು ಮಾಡಿದ್ದ ಸುಮಾರು 306 ಲೀಟರ್ ವೈನ್ ವಶಪಡಿಸಿಕೊಂಡಿದ್ದು. ಇದರ ಅಂದಾಜು ಮೌಲ್ಯ ಸುಮಾರು 2,01,960 ಲಕ್ಷ ರೂಪಾಯಿ ಅಗಿದ್ದು.‌ಆರೋಪಿ ಜಿತೇಂದ್ರ ಜೈನ್ (46) ವಿರುದ್ಧ ಬೆಳ್ತಂಗಡಿ ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಅಬಕಾರಿ ದಳದ ಇನ್ಸ್ಪೆಕ್ಟರ್ ಲಕ್ಷಣ್ ಉಪ್ಪಾರ್, ಹೆಡ್ ಕಾನ್ಸ್‌ಟೇಬಲ್ ಬೋಜ ಕೆ, ವಿನಯ್ , ಶಿವಶಂಕರಪ್ಪ ಮತ್ತು ವಾಹನ ಚಾಲಕ ನವೀನ್ ಭಾಗವಹಿಸಿದರು.

error: Content is protected !!