ಓಡೀಲು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಚಪ್ಪರ ಮುಹೂರ್ತ: ಕಾರ್ಯಾಲಯ ಉದ್ಘಾಟನೆ: ಏ.08ರಿಂದ 17ರವರೆಗೆ ವಿಜೃಂಭಣೆಯ ಅಷ್ಟಬಂಧ ಬ್ರಹ್ಮಕಲಶೋತ್ಸವ

ಬೆಳ್ತಂಗಡಿ: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.08ರಿಂದ ಅಷ್ಟಬಂಧ ಬ್ರಹ್ಮಕಲಶೋತ್ಸವ ಆರಂಭವಾಗಲಿದ್ದು ಇಂದು (ಮಾ.22) ಚಪ್ಪರ ಮುಹೂರ್ತ ಹಾಗೂ ಕಾರ್ಯಾಲಯ ಕಛೇರಿ ಉದ್ಗಾಟನೆಗೊಂಡಿತು.

ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಯೋಗೀಶ್ ಕುಮಾರ್ ನಡಕ್ಕರ ಎಲ್ಲರೂ ಒಟ್ಟಾಗಿ ಸೇರಿಕೊಂಡು ಒಂದೇ ಮನಸ್ಸಿನಲ್ಲಿ ಕಾರ್ಯನ್ಮುಖರಾದರೆ ಯಶಸ್ವಿ ಬ್ರಹ್ಮಕಲಶೋತ್ಸವ ನಡೆಯಲು ಸಾಧ್ಯ. ಅಧ್ಯಕ್ಷರಾದ ಶಶಿಧರ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆಯಲು ಊರವರು ಒಂದೇ ಮನಸ್ಸಿನಿಂದ ಕೈಜೋಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಸೀತಾ ಆಲಂದೋಡಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ಸಂತೋಷ್ ಕುಮಾರ್ ಜೈನ್ ಪಡಂಗಡಿ, ಸೇವಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ, , ರಘುರಾಮ್ ಭಟ್ ಮಠ, ಗಂಗಾಧರ್ ಭಟ್ ಕೆವುಡೇಲು, ವಸಂತ ಗೌಡ, ಸೇರಿದಂತೆ ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಚಿದಾನಂದ ಇಡ್ಯಾ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

ಏ.08ರಿಂದ 17ರವರೆಗೆ ವಿಜೃಂಭಣೆಯ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲು ದೇವಸ್ಥಾನದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ.

error: Content is protected !!