ಭಾರತದ ಆರ್ಥಿಕ ಬಡತನಕ್ಕೆ ಸಿಕ್ಕಿತು ಉತ್ತರ: ದೇಶದಲ್ಲಿದೆ ಭಾರೀ ಆರ್ಥಿಕ ಅಸಮಾನತೆ: 2000ನೇ ವರ್ಷದಿಂದ ಹೆಚ್ಚಾಗಿದೆ ಸಂಪತ್ತಿನ ಕ್ರೋಢೀಕರಣದ ಪ್ರಮಾಣ!

ನವದೆಹಲಿ: ಅಂದು ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದ ಭಾರತ ಈಗ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ನಿಂತಿದೆ ಎಂಬುದು ಸದ್ಯದ ಮಾತು. ಆದರೆ ವಾಸ್ತವ ಬೇರೆ ಇದೆ. ದೇಶದಲ್ಲಿ ಈಗಲೂ ಬಡತನ ಕಾಡುತ್ತಿದೆ. ಹಸಿವಿನಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ದಿನದಲ್ಲಿ ಒಂದು ಹೊತ್ತು ಅನ್ನ ಸಿಗದೆ ಇರುವ ಮಕ್ಕಳಿದ್ದಾರೆ. ದೇಶದ ಪ್ರಗತಿಯನ್ನು ರಸ್ತೆ ಅಭಿವೃದ್ಧಿ, ಕಾಲುವೆ, ಅಣೆಕಟ್ಟು, ಕಟ್ಟಡ ನಿರ್ಮಾಣಗಳ ಮೂಲಕ ಅಳೆಯಲು ಸಾಧ್ಯವಿಲ್ಲ. ಅದೇನೆ ಇದ್ದರೂ ಇಳಿಕೆಯಾಗುವ ಬಡತನ, ಹೆಚ್ಚಾಗುವ ಶಿಕ್ಷಣ, ಮಹಿಳೆಯರ ಪ್ರಗತಿ ಇಂತವುಗಳಿAದ ಮಾತ್ರ ಅಳೆಯಲು ಸಾಧ್ಯ. ಪ್ರತೀ ಮನೆಯಲ್ಲಿ, ನಾವು ಯಾಕೆ ಶ್ರೀಮಂತರಾಗುವುದಿಲ್ಲ, ನಾವು ಯಾವತ್ತೂ ಬಡವರಾಗಿಯೇ ಉಳಿಯುತ್ತೇವಾ? ಎಂಬ ಪ್ರಶ್ನೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿರುತ್ತದೆ. ಈ ಬಡತನಕ್ಕೆ ಕಾರಣ ಏನು ಎಂಬುದನ್ನು ಪ್ಯಾರಿಸ್‌ನ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ವರ್ಲ್ಡ್ ಇನ್‌ಇಕ್ವಾಲಿಟಿ ಲ್ಯಾಬ್‌ನ ಥಾಮಸ್ ಪಿಕೆಟ್ಟಿ, ಹಾರ್ವರ್ಡ್ ಕೆನಡಿ ಸ್ಕೂಲ್ ಮತ್ತು ವರ್ಲ್ಡ್ ಇನ್‌ಇಕ್ವಾಲಿಟಿ ಲ್ಯಾಬ್‌ನ ಲ್ಯೂಕಾಸ್ ಚಾನ್ಸೆಲ್ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯ ಮತ್ತು ವಿಶ್ವ ಇನ್‌ಇಕ್ವಾಲಿಟಿ ಪ್ರಯೋಗಾಲಯದ ನಿತಿನ್ ಕುಮಾರ್ ಭಾರ್ತಿ ಅವರು ತನ್ನ 1922ರಿಂದ 2023ರ ನಡುವೆ ಭಾರತದಲ್ಲಿ ಆದಾಯ ಮತ್ತು ಸಂಪತ್ತಿನ ಅಸಮಾನತೆ ಎಂಬ ಶೀರ್ಷಿಕೆಯಡಿ ಬರೆದ ಪ್ರಬಂಧದಲ್ಲಿ ತಿಳಿಸಿದ್ದಾರೆ.

ನಾವು ಯಾಕೆ ಬಡವರು ಎಂಬ ಪ್ರಶ್ನೆಗೆ ನಿತಿನ್ ಕುಮಾರ್ ಭಾರ್ತಿ ಅವರು ನೀಡಿರುವ ಪ್ರಮುಖ ಉತ್ತರ ‘ಭಾರತದಲ್ಲಿ 2014-15ರಿಂದ 2022-23ರ ಮಧ್ಯೆ ಕೆಲವೇ ವ್ಯಕ್ತಿಗಳಲ್ಲಿ ಅತೀ ಹೆಚ್ಚಿನ ಸಂಪತ್ತು ಕೇಂದ್ರೀಕರಣವಾಗುತ್ತಿದೆ’ ಎಂಬುದು. ಇದನ್ನು ಅವರು ತನ್ನ ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ. 2022-23ರಲ್ಲಿ ದೇಶದ ಕೇವಲ 1ರಷ್ಟು ಜನರಲ್ಲಿ ಮಾತ್ರ ಶೇ.22.6ರಷ್ಟು ಆದಾಯ ಮತ್ತು ಶೇ.40.1ರಷ್ಟು ಸಂಪತ್ತಿನ ಷೇರುಗಳಿವೆ. ಇದು ವಿಶ್ವದ ಆಫ್ರಿಕಾ, ಬ್ರೆಜಿಲ್ ಮತ್ತು ಅಮೆರಿಕ ದೇಶಕ್ಕಿಂತಲೂ ಅಧಿಕ ಎಂದು ವಿಶ್ಲೇಷಿಸಿದ್ದಾರೆ.

ಸಂಪತ್ತು ಕೆಲವೇ ಜನರಲ್ಲಿ ಕ್ರೋಢೀಕರಣವಾಗುತ್ತಿರುವುದರಿಂದ ದೇಶದಲ್ಲಿ ಆರ್ಥಿಕ ಅಸಮಾನತೆಯ ಅಂತರ ಬೆಳೆಯುತ್ತಲೇ ಇದೆ. ಇದು ಬಡವ ಮತ್ತು ಶ್ರೀಮಂತರ ನಡುವಿನ ಅಂತರವನ್ನು ಮತ್ತಷ್ಟು ಹಿಗ್ಗಿಸುತ್ತಿದೆ. ವಿಚಿತ್ರ ಮತ್ತು ಅಚ್ಚರಿಯ ಅಂಶವೆಂದರೆ, ದೇಶದ 1 ಪ್ರತಿಶತದಷ್ಟು ಜನರಲ್ಲಿ ಇರುವ ಶೇಕಡಾ 40ರಷ್ಟು ಸಂಪತ್ತು ದೇಶದ ಉಳಿದ ಜನರಿಗೆ ಹೋಲಿಸಿದರೆ ಅವರ ಸಂಪತ್ತಿನ ಪಾಲು ಬರೋಬ್ಬರಿ ಶೇ.40.1ರಷ್ಟಿದೆ!. ಭಾರತದಲ್ಲಿ ಶೇ.1ರಷ್ಟು ಸಿರಿವಂತ ಕುಟುಂಬಗಳಲ್ಲಿ ಮಾತ್ರ ಸಂಪತ್ತು ಇದೆ.

ಭಾರತದ ಸ್ವಾತಂತ್ರ‍್ಯದ ಸಮಯದ ಅಂದರೆ 1940ರ ದಶಕದಲ್ಲಿ ಶೇ.13 ಕ್ಕೆ ಇಳಿಕೆ ಕಂಡಿದ್ದ ಶ್ರೀಮಂತರ ಸಂಪತ್ತಿನ ಕ್ರೂಡೀಕರಣ 1950 ರ ದಶಕದಲ್ಲಿ ತುಸು ಏರಿಕೆಯಾಯಿತು. ನಂತರ ಕುಸಿಯುತ್ತಾ ಸಾಗಿದ್ದು, 1982ರ ವೇಳೆಗೆ ಅದು 6.1 ಪ್ರತಿಶತಕ್ಕೆ ಇಳಿದಿತ್ತು. ಇದಕ್ಕೆ ಪ್ರಮುಖ ಕಾರಣವಾಗಿದ್ದು, ಸರ್ಕಾರ ಜಾರಿಗೆ ತಂಡ ಸಮಾಜವಾದಿ ನೀತಿ. ಬಳಿಕ 1991 ರಲ್ಲಿ ಉದಾರೀಕರಣದ ಪರಿಣಾಮವಾಗಿ ಮತ್ತೆ ಸಂಪತ್ತಿನ ಕೇಂದ್ರೀಕರಣ ಏರಿಕೆ ಕಾಣುತ್ತಾ ಸಾಗಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತದಲ್ಲಿ ಆರ್ಥಿಕ ಮಾಹಿತಿ ಘೋಷಣೆ ಸ್ವೀಕಾರಾರ್ಹವಾಗಿಲ್ಲ ಮತ್ತು ಕಳಪೆಯಾಗಿದೆ, ಜೊತೆಗೆ ಭಾರತದ ತೆರಿಗೆ ವ್ಯವಸ್ಥೆಯಲ್ಲಿ ಲೋಪ ಇರುವುದೇ ಸಂಪತ್ತಿನ ಕ್ರೂಡೀಕರಣಕ್ಕೆ ಕಾರಣ ಎಂದು ಅಧ್ಯಯನದ ಮೂಲಕ ತಿಳಿಸಿದ್ದಾರೆ. 2022-23ರಲ್ಲಿ 167 ಶ್ರೀಮಂತ ಕುಟುಂಬಗಳ ನಿವ್ವಳ ಸಂಪತ್ತಿನ ಮೇಲೆ ಪ್ರತಿಶತ 2ರಷ್ಟು ಸೂಪರ್ ತೆರಿಗೆ ವಿಧಿಸಲಾಗಿದೆ. ಅವರ ಆದಾಯವು ರಾಷ್ಟ್ರೀಯ ಆದಾಯದ ಶೇ.0.5ರಷ್ಟಿದೆ. ಜಾಗತೀಕರಣದ ಪ್ರಭಾವದಿಂದ ಸಿರಿವಂತರು ಮಾತ್ರ ಪ್ರಯೋಜನ ಪಡೆಯುತ್ತಿದ್ದಾರೆ. ಹೀಗಾಗಿ, ಆದಾಯ ಮತ್ತು ಸಂಪತ್ತು ಎರಡನ್ನೂ ಸರಿದೂರಿಸಲು ತೆರಿಗೆ ವ್ಯವಸ್ಥೆಯ ಪುನರ್ ರಚನೆ ಮತ್ತು ಆರೋಗ್ಯ, ಶಿಕ್ಷಣ ಹಾಗೂ ಆಹಾರ ಕ್ಷೇತ್ರದಲ್ಲಿ ಸಾರ್ವಜನಿಕ ಹೂಡಿಕೆಗಳು ಹೆಚ್ಚಾಗಬೇಕಿದೆ ಎಂಬುದನ್ನು ಪ್ರಬಂಧ ಗುರುತಿಸಿದೆ.

error: Content is protected !!