ಬೆಳ್ತಂಗಡಿ: ವಾಹನಗಳಿಗೆ ಡಿಕ್ಕಿ ಹೊಡೆದ ಜೆಸಿಬಿ: ಆಪರೇಟರ್ ಅಮಲು ಪದಾರ್ಥ ಸೇವಿಸಿರುವ ಶಂಕೆ!

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಪೈಪ್ ಲೈನ್ ಕಾಮಗಾರಿ ನಡೆಸುತ್ತಿರುವ ಜೆಸಿಬಿ ಆಪರೇಟರ್ ಒಬ್ಬ ಅಮಲು ಪದಾರ್ಥ ಸೇವಿಸಿ ಬೇಕಾಬಿಟ್ಟಿ ಜೆಸಿಬಿಯನ್ನು ಓಡಿಸಿ ಕೆಲವು ವಾಹನಗಳಿಗೆ ಅಪಘಾತ ಉಂಟು ಮಾಡಿರುವ ಘಟನೆ ಮಾ.13ರಂದು ಮಧ್ಯಾಹ್ನ ಸಂಭವಿಸಿದೆ.

ಅಮಲು ಪದಾರ್ಥ ಸೇವಿಸಿದ ಮತ್ತಿನಿಂದ ಜೆಸಿಬಿಯನ್ನು ಬೇಕಾಬಿಟ್ಟಿ ಚಲಾಯಿಸಿ, ಇದೀಗ ಮುಂಡಾಜೆ ಗ್ರಾಮದ ಸೀಟು ಕಾಯರ್ತೋಡಿ ರಸ್ತೆಯಲ್ಲಿ ಜೆಸಿಬಿಯನ್ನು ತಂದು ನಿಲ್ಲಿಸಿದ್ದಾನೆ. ಜೆಸಿಬಿ ಟಯರ್ ಪಂಕ್ಚರ್ ಆಗಿದ್ದರೂ ಚಲಾಯಿಸಿಕೊಂಡು ಹೋಗಿದ್ದಾನೆ. ಅಲ್ಲದೇ ಮದ್ದಡ್ಕದಲ್ಲಿ  ಇದೇ ರೀತಿ  ಅಮಲು ಪದಾರ್ಥ ಸೇವಿಸಿ ನೀರಿನ ಟ್ಯಾಂಕರ್  ಅಪಘಾತಕ್ಕೀಡಾಗಿರುವ ಬಗ್ಗೆ   ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಹೈವೇ ಪೆಟ್ರೋಲ್ ಆಗಮಿಸಿದ್ದು ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

error: Content is protected !!