ಲೋಕಸಭಾ ಚುನಾವಣೆ,2024 ಇಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ..! ಹಲವು ಕ್ಷೇತ್ರದಲ್ಲಿ ಬಿಜೆಪಿ ಹೊಸ ಅಭ್ಯರ್ಥಿಗಳು..? ಉಡುಪಿ ಕೋಟ, ದ.ಕ.ಜಿಲ್ಲೆಗೆ ಚೌಟ ಹೆಸರು ಫೈನಲ್..?

 

 

ಬೆಳ್ತಂಗಡಿ: ಲೋಕಸಭಾ ಚುನಾವಣೆಯ ದಿನಾಂಕ ಎರಡು ದಿನದೊಳಗೆ ಘೋಷಣೆಯಾಗಲಿದ್ದು ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಕಾರ್ಯಚಟುವಟಿಕೆಗಳು ಪ್ರಾರಂಭವಾಗಿದೆ.ಈಗಾಗಲೇ ಕಾಂಗ್ರೆಸ್‌ 2 ನೇ ಪಟ್ಟಿಯನ್ನೂ ಬಿಡುಗಡೆ ಗೊಳಿಸಿದೆ. ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಗೊಂಡಿದ್ದು ಇಂದು ಅಥವಾ ನಾಳೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಬಲ್ಲ ಮೂಲಗಳ ಪ್ರಕಾರ ಈ ಬಾರಿ ಹಲವು ಹೊಸ ಮುಖಗಳಿಗೆ ಅವಕಾಶ ನೀಡುವತ್ತ ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎಂಬ ಮಾಹಿತಿಯೂ ಲಭ್ಯವಾಗುತ್ತಿದೆ. ಈಗಾಗಲೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊಂಡು ವರಿಷ್ಠರ ಕೈ ಸೇರಿದೆ.ರಾಜ್ಯದ 5 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆ ಖಚಿತ ಎಂಬ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ.

*ಮೈಸೂರು – ಪ್ರತಾಪ್ ಸಿಂಹ ಅಥವಾ ಯದುವೀರ್

*ದಕ್ಷಿಣ ಕನ್ನಡ – ಕ್ಯಾ! ಬೃಜೇಶ್ ಚೌಟ,  ಕೇಶವ ಬಂಗೇರ.ನಳಿನ್ ಕುಮಾರ್.

*ಉಡುಪಿ-ಚಿಕ್ಕಮಗಳೂರು, ಕೋಟ ಶ್ರೀನಿವಾಸ ಪೂಜಾರಿ.

*ಬೆಂಗಳೂರು ಉತ್ತರ-ಶೋಭಾ ಕರಂದ್ಲಾಜೆ.

ಉತ್ತರ ಕನ್ನಡ-  ಇನ್ನೂ ನಿರ್ಧಾರವಾಗಿಲ್ಲ

ದ.ಕ. ಜಿಲ್ಲೆಯಲ್ಲಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಅವಕಾಶ ಕಡಿಮೆ ಇದೆ.ಅದರೆ ಒಂದು ವೇಳೆ ನನಗೆ ಅವಕಾಶ ನೀಡದಿದ್ದರೂ ಕೇಶವ ಬಂಗೇರ ಅವರಿಗೆ ಅವಕಾಶ ನೀಡಬೇಕು ಎಂಬ ಬಗ್ಗೆ ವಿನಂತಿ ನಳಿನ್ ಕುಮಾರ್ ಮಾಡಿದ್ದಾರೆ ಎಂಬ   ಬಗ್ಗೆಯೂ ಚರ್ಚೆಯಾಗುತ್ತಿದೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಲ್ಲವರು ಹಾಗೂ ನಾಮಧಾರಿ ಸಮುದಾಯದ ಆಕ್ರೋಶ ಕಡಿಮೆ ಮಾಡುವ ಉದ್ದೇಶದಿಂದ ಕೋಟ ಶ್ರೀನಿವಾಸ ಪೂಜಾರಿ ಅವರ ಹೆಸರು ವರಿಷ್ಠರು ಅಂತಿಮಗೊಳಿಸುವ ಸಾಧ್ಯತೆ ಇದೆ.ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡದಲ್ಲಿ ಬೃಜೇಶ್ ಚೌಟ ಅವರಿಗೆ ಅವಕಾಶ ಹೆಚ್ಚಾಗಿದೆ.  ಅದರೆ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ದತೆ ಮಾಡಿಕೊಂಡಿದ್ದು , ಸತ್ಯಜಿತ್ ಸುರತ್ಕಲ್ ಅಲ್ಲಲ್ಲಿ ಜನಾದೇಶ ಸಭೆಗಳನ್ನು ಆಯೋಜಿಸಿ ತನ್ನ ಅಸಾಮಾಧಾನವನ್ನು  ಬಿಜೆಪಿ ವರಿಷ್ಠರ ಗಮನಕ್ಕೆ ತರುವ ಪ್ರಯತ್ನ ಮಾಡುತಿದ್ದಾರೆ. ಅದ್ದರಿಂದ ಈ ಇಬ್ಬರು ನಾಯಕರುಗಳ  ಸ್ಪಷ್ಟ ನಿಲುವು ಇನ್ನೂ ಕೂಡ  ಕುತೂಹಲ ಮೂಡಿಸಿದೆ.ಈ ಬಗ್ಗೆಯೂ   ಬಿಜೆಪಿ ಆಪ್ತ ವಲಯದಲ್ಲಿ ಚರ್ಚೆಯಾಗುತ್ತಿದೆ.ಒಟ್ಟಿನಲ್ಲಿ ಎಲ್ಲ ಕುತೂಹಲಗಳಿಗೆ ಇಂದು ಅಥವಾ ನಾಳೆ ತೆರೆ ಬೀಳಲಿದೆ.

error: Content is protected !!