ಮಂಗಳವಾರದಿಂದ ರಮಝಾನ್ ಉಪವಾಸ ಆರಂಭ:

 

 

ಮಂಗಳೂರು: ಪವಿತ್ರ ರಮಝಾನ್‌ನ ಪ್ರಥಮ ಚಂದ್ರದರ್ಶನವು ಸೋಮವಾರ ಆಗಿರುವುದರಿಂದ ಮಂಗಳವಾರದಿಂದ ರಮಝಾನ್ ಉಪವಾಸ ಆಚರಿಸಲು ದ.ಕ.ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರ ಪರವಾಗಿ ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ಕೋಶಾಧಿಕಾರಿ ಎಸ್.ಎಂ. ರಶೀದ್ ಹಾಜಿ ತಿಳಿಸಿದ್ದಾರೆ.
ಉಡುಪಿ ಸಂಯುಕ್ತ ಖಾಝಿ ಅಲ್‌ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಹಾಗೂ ಉಳ್ಳಾಲ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್‌ಬುಖಾರಿ ಪ್ರತ್ಯೇಕ ಹೇಳಿಕೆಯಲ್ಲಿ ಮಂಗಳವಾರದಿಂದ ಉಪವಾಸ ಆಚರಿಸಲು ಕರೆ ನೀಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

error: Content is protected !!