ಮುಖೇಶ್ ಅಂಬಾನಿಯ ಕಿರಿಯ ಪುತ್ರನ ಪ್ರಿವೆಡ್ಡಿಂಗ್ ಸಮಾರಂಭದಲ್ಲಿ ಕಣ್ಸೆಳೆದ ಕೈಗಡಿಯಾರ..!: ವಾಚ್ ನೋಡಿ ಮಾರ್ಕ್ ಜುಕರ್ ಬರ್ಗ್ ಹಾಗೂ ಪತ್ನಿ ಪ್ರಿಸ್ಸಿಲ್ಲಾ ಫಿದಾ..!: ಅನಂತ್ ಅಂಬಾನಿ ಧರಿಸಿದ್ದ ವಾಚ್ ಬೆಲೆ ಎಷ್ಟು ಗೊತ್ತಾ..?

ಮುಂಬೈ: ಇತ್ತೀಚೆಗೆ ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದ ಸದ್ದು ಹೆಚ್ಚಾಗಿತ್ತು. ಕೋಟ್ಯಾಂತರ ರೂ. ಖರ್ಚು ಮಾಡಿ ಖ್ಯಾತ ಸಿನಿಮಾ ನಟರನ್ನು ಈ ಸಮಾರಂಭಕ್ಕೆ ಆಹ್ವಾನಿಸಿ, ಅದ್ದೂರಿ ಕಾರ್ಯಕ್ರಮ ನಡೆಸಲಾಗಿತ್ತು. ಆದರೆ ಈಗ ಈ ಸಮಾರಂಭದಲ್ಲಿ ಅನಂತ್ ಅಂಬಾನಿ ಧರಿಸಿದ್ದ ವಾಚ್ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

ಸಮಾರಂಭಕ್ಕೆ ಬಂದಿದ್ದ ಶ್ರೀಮಂತ ಅತಿಥಿಗಳು ಕೂಡ ಅನಂತ್ ಅಂಬಾನಿಯ ಕೈಗಡಿಯಾರ ಕಂಡು ಆಶ್ಚರ್ಯಪಟ್ಟಿದ್ದಾರೆ. ಫೇಸ್‌ಬುಕ್- ಇನ್‌ಸ್ಟಾಗ್ರಾಂ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಹಾಗೂ ಅವರ ಪತ್ನಿ ಪ್ರಿಸ್ಸಿಲ್ಲಾ ಚೆನ್ ಅವರೂ ವಾಚ್ ಕಂಡು ಮೂಕವಿಸ್ಮಿತರಾಗಿದ್ದಾರೆ. ಅಲ್ಲದೆ ಈ ವಾಚ್ ಬಗ್ಗೆ ಪ್ರಿಸ್ಸಿಲ್ಲಾ ಹಾಗೂ ಅನಂತ್ ಅಂಬಾನಿ ನಡುವೆ ಮಾತುಕತೆ, ಚರ್ಚೆ ನಡೆದಿದೆ.

ಅನಂತ್ ಅಂಬಾನಿ ಧರಿಸಿದ್ದ ವಾಚ್ ಬೆಲೆ ಕೇಳಿದ್ರೆ ಖಂಡಿತ ಶಾಕ್ ಆಗ್ತೀರಿ. ರೋಲ್ಸ್ರಾಯ್ ಕಾರಿನ ಬೆಲೆ 6 ರಿಂದ 7 ಕೋಟಿ ರೂಪಾಯಿ. ಆದರೆ ಅನಂತ್ ಅವರು ಧರಿಸಿದ್ದ ವಾಚ್ ಬೆಲೆ 15 ಕೋಟಿ ರೂಪಾಯಿ. ಅಂದ್ರೆ ಅನಂತ್ ಐಷಾರಾಮಿ ವಾಚ್ ಬೆಲೆಯಲ್ಲಿ ಎರಡು ಐಷಾರಾಮಿ ರಾಲ್ಸ್ ರಾಯ್ಸ್ ಕಾರುಗಳನ್ನು ಖರೀದಿಸಬಹುದು. 2021ರಲ್ಲಿ ಲಾಂಚ್ ಮಾಡಲಾದ ಈ ಗಡಿಯಾರವು ರೂಬೀಸ್ ಹಾಗೂ ಬ್ಲೂ ಸಫೈರ್ಸ್ ಬಣ್ಣಗಳಲ್ಲಿ ಮಾತ್ರ ಬರುತ್ತದೆ. ಅನಂತ್ ಅಂಬಾನಿ ಅವರು ಧರಿಸಿರುವ ವಾಚ್ 40.5 ಎಂಎಂ  ಕೇಸ್ ಹೊಂದಿದ್ದು, ಗ್ರೇಡಿಯಂಟ್ ಗ್ರೇ ಡಯಲ್‌ನೊಂದಿಗೆ ಬರುತ್ತದೆ. ಇಡೀ ಜಗತ್ತಿನಲ್ಲಿ ಈ ರೀತಿಯ ಕೈಗಡಿಯಾರಗಳು ಇರೋದು ಬಹಳ ಕಡಿಮೆ.

error: Content is protected !!