‘ಪಾಕಿಸ್ತಾನ ಜಿಂದಾಬಾದ್​’ ಘೋಷಣೆ ಕೂಗಿರುವುದು ಎಫ್​ಎಸ್​ಎಲ್​ ವರದಿಯಲ್ಲಿ ಸ್ಪಷ್ಟವಾಗಿದೆ:ಮುಲಾಜಿಲ್ಲದೇ ಆರೋಪಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು’:ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಹಿನ್ನಲೆ ಮೂವರನ್ನು ಬಂಧಿಸಲಾಗಿದ್ದು‌ಈ‌ ಬಗ್ಗೆ ಗೃಹ ಸಚಿವ ಪರಮೇಶ್ವರ್​ ಅವರು ಸ್ಪಷ್ಟನೆ ನೀಡಿದ್ದಾರೆ.

“ವಿಧಾನಸೌಧದಲ್ಲಿ ‘ಪಾಕಿಸ್ತಾನ ಜಿಂದಾಬಾದ್​’ ಎಂದು ಕೂಗಿರುವುದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಸ್ಪಷ್ಟವಾಗಿದೆ. ಇದರ ಆಧಾರದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಿ, ಕೋರ್ಟ್​ಗೆ ಹಾಜರುಪಡಿಸಲಾಗಿದೆ. ಘೋಷಣೆ ಕೂಗಿದವರಲ್ಲಿ ಇನ್ನೆಷ್ಟು ಜನರು ಇದ್ದರಾ ಎಂಬುದು ತಿಳಿದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ದೇಶ ವಿರೋಧಿ ಹೇಳಿಕೆ ಇರುವುದು ಸ್ಪಷ್ಟ” ಎಂದಿದ್ದಾರೆ.

ಬಂಧಿತರನ್ನು ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಸರ್ಕಾರಕ್ಕೆ ಇದರಿಂದ ಯಾವುದೇ ಮುಜುಗರವಿಲ್ಲ. ನಾವೇನೂ ಅವರಿಗೆ ಕೂಗಲು ತಿಳಿಸಿರಲಿಲ್ಲ. ನಮ್ಮ ಸರ್ಕಾರವೇ ಕೂಗಿದವರನ್ನು ಬಂಧಿಸಿದೆ. ಈ ಕೆಲಸವನ್ನು ಹೊಗಳಬೇಕು. ಮುಲಾಜಿಲ್ಲದೇ ಆರೋಪಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ವಿಪಕ್ಷಗಳ ಆರೋಪ ಸಹಜ. ಅದನ್ನೆಲ್ಲಾ ಪರಿಗಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.

error: Content is protected !!