ಇಂದಬೆಟ್ಟು: ಮೋರಿಗೆ ಡಿಕ್ಕಿ ಹೊಡೆದ ಬೈಕ್: ಸ್ಥಳೀಯ ನಿವಾಸಿ ಬಸ್ ಚಾಲಕ ಸ್ಥಳದಲ್ಲೇ ಸಾವು:

 

 

ಬೆಳ್ತಂಗಡಿ: ಬೈಕ್ಕೊಂದು ರಸ್ತೆ ಬದಿಯ ಮೋರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದಬೆಟ್ಟು ಬಳಿ ಮಾ 03 ರ ರಾತ್ರಿ ನಡೆದಿದೆ.

ಇಂದಬೆಟ್ಟು ನಿವಾಸಿ ಖಾಸಗಿ ಬಸ್ ಚಾಲಕ ಜೋಶನ್ ಎಂಬವರು ಕಿಲ್ಲೂರಿನಿಂದ ತನ್ನ ಇಂದಬೆಟ್ಟು ಮನೆಗೆ ರಾತ್ರಿ ಹಿಂದಿರುಗುತ್ತಿರುವ ವೇಳೆ ತಾನು ಚಲಾಯಿಸುತಿದ್ದ ಬೈಕ್ ಇಂದಬೆಟ್ಟು ಬಳಿಯ ಕುತ್ರೊಟ್ಟು ಎಂಬಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಗೆ ಡಿಕ್ಕಿ ಹೊಡೆದು ಮೋರಿಯ ಕೆಳಗೆ ಎಸೆಯಲ್ಪಟ್ಟಿದ್ದು ಅಪಘಾತದ ಶಬ್ದ ಕೇಳಿ ಸ್ಥಳೀಯರು ಬಂದು ನೋಡಿದಾಗ ತಲೆಗೆ ಗಂಭೀರ ಗಾಯಗೊಂಡು ಅದಾಗಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಬೆಳ್ತಂಗಡಿ ಟ್ರಾಫಿಕ್ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!