ಯಕ್ಷಗಾನ ಕಲಾವಿದನಿಗೆ ಆಸರೆಯಾದ ಉದ್ಯಮಿ ಶಶಿಧರ್ ಶೆಟ್ಟಿ: ಯಕ್ಷಧ್ರುವ ಪಟ್ಲ ಫೌಂಢೇಶನ್ ಮೂಲಕ ನೂತನ ಮನೆ ನಿರ್ಮಾಣ: ಭಗವತಿ ಮೇಳದ ಗುಡ್ಡಪ್ಪ ಸುವರ್ಣ ಅವರಿಗೆ ಮನೆ ಹಸ್ತಾಂತರ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಢೇಶನ್, ಕಲಾವಿದರ ಬಾಳಿನ ಬೆಳಕು. ಕರಾವಳಿ ಕರ್ನಾಟಕದ ಯಕ್ಷಗಾನ, ನಾಟಕ, ರಂಗಭೂಮಿ , ದೈವಾರಾಧನೆಗೆ ಸಹಕಾರ ನೀಡುತ್ತಾ ಬರುತ್ತಿರುವ ಈ ಸಂಸ್ಥೆ ಅನೇಕ ಕಲಾವಿದರ ಬದುಕಿಗೆ ಆಶ್ರಯ ಕಲ್ಪಿಸಿದೆ. ಪಟ್ಲ ಯಕ್ಷಾಶ್ರಯ ಯೋಜನೆಯಡಿ ಯಕ್ಷಗಾನ ರಂಗದ ಹಿರಿಯ ಕಲಾವಿದರು ಸಸಿಹಿತ್ಲು ಭಗವತೀ ಮೇಳದ ಗುಡ್ಡಪ್ಪ ಸುವರ್ಣರಿಗೆ ನೂತನ ಮನೆಯನ್ನು ನಿರ್ಮಿಸಿ ಫೆ.22ರಂದು ಆ ಮನೆಯನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.


ಫೌಂಡೇಶನಿನ ಮಹಾದಾನಿಯಾದ ಉದ್ಯಮಿ ಶಶಿಧರ ಬಿ.ಶೆಟ್ಟಿ ಬರೋಡರವರ ಸಹಕಾರದಲ್ಲಿ, ಸುಳ್ಯ ತಾಲೂಕಿನ ಪಂಜ ಗ್ರಾಮದಲ್ಲಿ ಮನೆಯನ್ನು ನಿರ್ಮಿಸಿ, ಗೃಹಪ್ರವೇಶ ಕಾರ್ಯಕ್ರಮ ನೆರವೇರಿಸಿ ಮನೆಯನ್ನು ಹಸ್ತಾಂತರಿಸಲಾಗಿದೆ. ಬಳಿಕ ಪಟ್ಲ ಫೌಂಡೇಶನಿಗೆ ಹಾಗೂ ಸತ್ಕಾರ್ಯಕ್ಕೆ ಸಹಕಾರ ನೀಡಿದ ಎಲ್ಲಾ ದಾನಿಗಳಿಗೆ, ಶಶಿಧರ ಬಿ ಶೆಟ್ಟಿ ಬರೋಡ ಇವರಿಗೆ ಗುಡ್ಡಪ್ಪ ಸುವರ್ಣ ದಂಪತಿಗಳು ಮನಃಪೂರ್ವಕವಾಗಿ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಪುತ್ತೂರು ಘಟಕದ ಗೌರವಾಧ್ಯಕ್ಷರಾದ ಸವಣೂರು ಸೀತಾರಾಮ ರೈ, ಹಿರಿಯ ಕಲಾವಿದರಾದ ಸರಪಾಡಿ ಅಶೋಕ್ ಶೆಟ್ಟಿಯವರು, ಸಸಿಹಿತ್ಲು ಮೇಳದ ಯಜಮಾನರಾದ ರಾಜೇಶ್ ಗುಜರನ್, ಸುಳ್ಯ ಘಟಕದ ಶ್ರೀನಾಥ್ ರೈ, ಪ್ರೀತಮ್ ರೈ, ಬೆಳ್ಳಾರೆ ರಮೇಶ್ ರೈ, ಪ್ರಶಾಂತ್ ರೈ ಪಂಜ, ಡಾ.ಪ್ರಖ್ಯಾತ ಶೆಟ್ಟಿ ಹಾಗೂ ಇನ್ನೂ ಅನೇಕರು ಉಪಸ್ಥಿತಿತರಿದ್ದರು.

 

ಇದನ್ನೂ ಓದಿ:

 

ದೇವಸ್ಥಾನ, ಸಂಘ ಸಂಸ್ಥೆಗಳಿಗೆ ₹ 11 ಲಕ್ಷ ದೇಣಿಗೆ ನೀಡಿದ ಉದ್ಯಮಿ ಶಶಿಧರ್ ಶೆಟ್ಟಿ ಗುರುವಾಯನಕೆರೆ:

 

 

error: Content is protected !!