ಉಜಿರೆ, ಕಾಲೇಜು ವಿದ್ಯಾರ್ಥಿ ನಾಪತ್ತೆ; ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ ಪೋಷಕರು:

 

 

 

ಉಜಿರೆ: ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಫೆ.16 ರಿಂದ ಕಾಣೆಯಾಗಿದ್ದು ‌ಮಗನನ್ನು ಹುಡುಕಿ ಕೊಡುವಂತೆ ಪೋಷಕರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು‌ ನೀಡಿದ್ದಾರೆ.

ವರ್ಷಿತ್ ಹೆಚ್‌ ಎಂ(19) ಎಂಬ ಯುವಕ ಉಜಿರೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಬಿಸಿಎ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ಉಜಿರೆಯ ಖಾಸಗಿ ಪಿಜಿಯಲ್ಲಿ ಉಳಿದುಕೊಂಡಿದ್ದರು.

ಫೆ.16 ರಂದು ಬೆಳಾಲು ಆರಿಕೋಡಿಯಿಂದ ಉಜಿರೆಗೆ ಬಂದು ಆತನ ಅಜ್ಜ, ಅಜ್ಜಿಯನ್ನು ಉಜಿರೆಯಿಂದ ಚಿಕ್ಕಮಮಗಳೂರಿಗೆ ತೆರಳುವ ಬಸ್ಸಿಗೆ ಹತ್ತಿಸಿ ತಾನು ಪಿಜಿಗೆ ಹೋಗುವುದಾಗಿ ಹೇಳಿದ್ದಾನೆ.‌

ಬಳಿಕ ತಾಯಿ ದೂರವಾಣಿ ಕರೆಮಾಡಿದ್ದು ವರ್ಷಿತ್‌ ನ ಮೊಬೈಲ್‌ ಸ್ವೀಚ್‌ ಆಫ್‌ ಆಗಿತ್ತು. ಈ ಬಗ್ಗೆ ಪಿಜಿ ಗೆ ಪೋನ್‌ ಮಾಡಿ ವಿಚಾರಿಸಿದಾಗ ಪಿಜಿಗೆ ಬಂದಿರುವುದಿಲ್ಲ ಎಂದು ತಿಳಿಸಿದ್ದಾರೆ. ನಂತರ ಸ್ನೇಹಿತರು, ಸಂಬಂಧಿಕರಲ್ಲಿ ವಿಚಾರಿಸಲಾಗಿದ್ದು ಆದರೆ ವರ್ಷಿತ್ ಹೆಚ್ ಎಂ ಎಲ್ಲಿಯೂ ಪತ್ತೆಯಾಗಿಲ್ಲ.

ಕಾಣೆಯಾದ ಮಗನನ್ನು ಪತ್ತೆಮಾಡಿಕೊಡಬೇಕಾಗಿ ಪೋಷಕರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿ ಮನವಿ ಮಾಡಿದ್ದಾರೆ.

error: Content is protected !!