ವೇಣೂರು ಪಟಾಕಿ ದುರಂತ, ಪ್ರಕರಣದ   ಮತ್ತೊಬ್ಬ ಆರೋಪಿ  ಬಂಧನ:  ತಮಿಳುನಾಡಿನಲ್ಲಿ ಸೆರೆ   8 ದಿನ‌‌ ಪೊಲೀಸ್ ಕಸ್ಟಡಿ:

 

 

ಬೆಳ್ತಂಗಡಿ : ವೇಣೂರಿನಲ್ಲಿ ನಡೆದಿದ್ದ ಪಟಾಕಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಐದನೇ ಆರೋಪಿಯನ್ನು ಬೆಳ್ತಂಗಡಿ ಸರ್ಕಲ್‌ ಇನ್ಸ್ಪೆಕ್ಟರ್ ತಂಡದ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ.‌ಆರೋಪಿಯ ಹೆಚ್ಚಿನ ತನಿಖೆಗಾಗಿ ಬೆಳ್ತಂಗಡಿ ಕೋರ್ಟ್ 8 ದಿನ ಪೊಲೀಸ್ ಕಸ್ಟಡಿ ನೀಡಲಾಗಿದೆ.

ಬೆಳ್ತಂಗಡಿ ತಾಲೂಕಿನ ವೇಣೂರಿನ ಕುಕ್ಕೇಡಿಯಲ್ಲಿ ಜ.28 ರಂದು ಸಂಜೆ ಪಟಾಕಿ ಕಾರ್ಖಾನೆಯಲ್ಲಿ ಪಟಾಕಿ ತಯಾರಿಕೆ ವೇಳೆ ಸ್ಫೋಟಗೊಂಡು ಮೂವರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು.ಪ್ರಕರಣದ ಮೂರನೇ ಆರೋಪಿ ದುರಂತದಲ್ಲಿ ಸಾವನ್ನಪ್ಪಿದ ವರ್ಗೀಸ್ ಅಗಿದ್ದಾನೆ. ಐದನೇ ಆರೋಪಿ ತಮಿಳುನಾಡು ರಾಜ್ಯದ ಶಿವಕುಮಾರ್ (49) ನನ್ನು ಫೆ.5ರಂದು ತಮಿಳುನಾಡಿನಿಂದ ಬಂಧಿಸಿ ಫೆ.6 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು.ಆರೋಪಿಗೆ ನ್ಯಾಯಾಲಯ ಹೆಚ್ಚಿನ ತನಿಖೆಗಾಗಿ ಫೆ.13 ರವರೆಗೆ 8 ದಿನ ಪೊಲೀಸ್ ಕಸ್ಟಡಿ ನೀಡಿದೆ.

ಐದನೇ ಆರೋಪಿ ಶಿವಕುಮಾರ್ ಬೆಂಕಿ ಕಡ್ಡಿ ತಯಾರಿಕೆಗೆ ತಮಿಳುನಾಡಿನಲ್ಲಿ ಲೈಸನ್ಸ್ ಪಡೆದಿದ್ದು. ತಮಿಳುನಾಡಿನಿಂದ ಬ್ರೋಕರ್ ಗಳ ಮೂಲಕ ಪಟಾಕಿ ರಾಸಾಯನಿಕಗಳನ್ನು ಹೊರ ರಾಜ್ಯದ ವ್ಯಕ್ತಿಗಳಿಗೆ ಕಳುಹಿಸಿಕೊಡುತ್ತಿದ್ದ. ಅಧಿಕ ಮಟ್ಟದಲ್ಲಿ ಪ್ರಕರಣದ ನಾಲ್ಕನೇ ಆರೋಪಿ ಬೆಂಗಳೂರಿನ ಅನಿಲ್ ಎಂ ಡೇವಿಡ್ ಗೆ ಪಟಾಕಿ ರಾಸಾಯನಿಕ ಸರಬರಾಜು ಮಾಡಿದ್ದ ಆರೋಪದಲ್ಲಿ ಶಿವಕುಮಾರ್ ನನ್ನು ಬಂಧಿಸಲಾಗಿದೆ.

error: Content is protected !!