ಬೆಳ್ತಂಗಡಿ : ಐವರು ಯುವಕರಿಂದ 42 ಸಿಮ್ ಕಾರ್ಡ್ ಸಂಗ್ರಹ..!: ಪ್ರಕರಣದ ತನಿಖೆಗೆ ಆಂತರಿಕ ಭದ್ರತಾ ಇಲಾಖೆಯ ಅಧಿಕಾರಿಗಳ ಎಂಟ್ರಿ..!

 

ಬೆಳ್ತಂಗಡಿ : ಅಕ್ರಮ 42 ಸಿಮ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಕಲೆಹಾಕಲು ಧರ್ಮಸ್ಥಳಪೊಲೀಸ್ ಠಾಣೆಗೆ ಆಂತರಿಕ ಭದ್ರತಾ ಇಲಾಖೆಯ (ISಆ)ಅಧಿಕಾರಿಗಳು ಎಂಟ್ರಿಯಾಗಿ ತನಿಖೆಗೆ ಆರಂಭಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಭಾಗದ ಆಂತರಿಕ ಭದ್ರತಾ ವಿಭಾಗದ (ISD) ಸಿಬ್ಬಂದಿ ಧರ್ಣಪ್ಪ ಮತ್ತು ದಿವ್ಯಾ ಫೆ.5 ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ಆಗಮಿಸಿ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ತೋಟತ್ತಾಡಿಯಲ್ಲಿ ಫೆ.1 ರಂದು 5ಜನ ಯುವಕರ ತಂಡ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿ ಮಾಡಿ ಬೆಂಗಳೂರು ಕಡೆ ಹೋಗುವಾಗ ಧರ್ಮಸ್ಥಳ ಪೊಲೀಸರು ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದದಲ್ಲಿ ವಶಕ್ಕೆ ಪಡೆದು ತನಿಖೆ ನಡೆಸಿದಾಗ ಬ್ಯಾಗ್ ನಲ್ಲಿ 42 ಸಿಮ್ ಕಾರ್ಡ್ ಪತ್ತೆಯಾಗಿತ್ತು.

ಈ ಪ್ರಕರಣದ ಆರೋಪಿಗಳಾದ ರಮೀಝ್(20), ಅಕ್ಬರ್ ಅಲಿ (24), ಮೊಹಮ್ಮದ್ ಮುಸ್ತಫಾ(22) ಮೊಹಮ್ಮದ್ ಸಾಧಿಕ್ (27) ಬಂಧಿಸಲಾಗಿತ್ತು. ಜೊತೆಗೆ 17 ವರ್ಷದ ಅಪ್ರಾಪ್ತ ಬಾಲಕ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದ. ಪ್ರಕರಣದ 4 ಜನ ಆರೋಪಿಗಳಿಗೆ ಬೆಳ್ತಂಗಡಿ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.

error: Content is protected !!