ಶ್ರೀ ನಾಗ-ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ಸಾನಿಧ್ಯ ಕ್ಷೇತ್ರ ನಾಗಚಾವಡಿ, ಗುಂಪಲಾಜೆ-ಪಣೆಜಾಲು: ದೈವಗಳ ಸಾನಿಧ್ಯದ ಅಭಿವೃದ್ಧಿಗೆ ಶಿಲಾನ್ಯಾಸ: ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ಸಹಕಾರ ನೀಡುವುದಾಗಿ ಉದ್ಯಮಿ ಶಶಿಧರ್ ಶೆಟ್ಟಿ ಭರವಸೆ

ಪಣೆಜಾಲು-ಗುಂಪಲಾಜೆ : ಓಡಿಲ್ನಾಳ ಗ್ರಾಮದ ನಾಗಚಾವಡಿ, ಗುಂಪಲಾಜೆ ಎಂಬಲ್ಲಿ ನಾಗ-ರಕ್ತೇಶ್ವರಿ ಹಾಗೂ ಪರಿವಾರ ದೈವಗಳಿಗೆ ದೈವಸ್ಥಾನ ಹಾಗೂ ಕಟ್ಟೆ ನಿರ್ಮಿಸಲು ಜ.14ರಂದು ಶಿಲಾನ್ಯಾಸ ನೆರವೇರಿಸಲಾಗಿದೆ.

ವೈದಿಕ ವಿಧಿ-ವಿಧಾನಗಳು ನಡೆದು ಬಳಿಕ ಉದ್ಯಮಿ ಶಶಿಧರ್ ಶೆಟ್ಟಿ “ನವಶಕ್ತಿ”, ಗುರುವಾಯನಕೆರೆಯವರು ಶಿಲಾನ್ಯಾಸ ನೆರವೇರಿಸಿದರು. ನಂತರ ಮಾತನಾಡಿದ ಅವರು ಜನರು ಭಕ್ತಿ, ಶ್ರದ್ದೆಯಿಂದ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದಲ್ಲಿ ಪಾಲ್ಗೊಳಲಿ. ಎಲ್ಲರಿಗೂ ಈ ಅವಕಾಶ ಸಿಗೋದಿಲ್ಲ, ಸಿಕ್ಕಿದ್ದು ನಿಮ್ಮೆಲ್ಲರ ಸೌಭಾಗ್ಯ , ನನ್ನ ಕಡೆಯಿಂದಲೂ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿ ಶುಭ ಹಾರೈಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಾಗ-ರಕ್ತೇಶ್ವರಿ ಸೇವಾ ಟ್ರಸ್ಟ್ ನ ಅಧ್ಯಕ್ಷ, ಶಶಿರಾಜ್ ಶೆಟ್ಟಿಯವರು ಈ ಕ್ಷೇತ್ರ ಮುಂದಿನ ದಿನಗಳಲ್ಲಿ ಕಾರ್ಣಿಕದ ಕ್ಷೇತ್ರವಾಗಿ ನಮ್ಮ ಕಣ್ಣಾಮುಂದೆ ಬರಲಿದೆ. ಈ ಶುಭ ಕಾರ್ಯಕ್ಕೆ ಭಕ್ತಾಧಿಗಳು ಸಾಮಾರ್ಥ್ಯಕನುಸಾರವಾಗಿ ದೇಣಿಗೆ ನೀಡುವುದರ ಮೂಲಕ ನಮ್ಮ ಜೊತೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಆನಂದ್ ಶೆಟ್ಟಿ ಐಸಿರಿಯವರು ಮಾತನಾಡಿ ಕಳೆದ ಎರಡು-ಮೂರು ವರ್ಷಗಳಿಂದ ಈ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಕಾರ್ಯ ಮಾಡಬೇಕೆಂದು ಭಕ್ತಾದಿಗಳು ಇಟ್ಟಂತಹ ಕನಸು ಇಂದು ನೆರವೇರುತ್ತಿದೆ. ವಿವಿಧ ರೀತಿಯಲ್ಲಿ ಭಕ್ತರು ಜೊತೆಗೂಡಿ ಸಹಕಾರ ನೀಡಬೇಕೆಂದು ವಿಜ್ಞಾಪನೆ ಮಾಡಿದರು.

ಶುಭ ಕಾರ್ಯದಲ್ಲಿ ರಾಜು ಶೆಟ್ಟಿ ಬೇಂಗ್ಯತ್ಯಾರ್, ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭಾರತಿ ಎಸ್ ಶೆಟ್ಟಿ, ವಾಸ್ತುತಜ್ಞರಾದ ರತ್ನಾಕರ ಭಟ್ ಸರಪಾಡಿ-ಮದ್ದಡ್ಕ , ಯತೀಶ್ ಕುಲಾಲ್ ಸಿರಿಮಜಲ್, ಕಿರಣ್ ಭಟ್ ಗುಂಪಲಾಜೆ, ಹಿರಿಯರಾದ ಎ.ಪೂವಪ್ಪ ಭಂಡಾರಿ, ಶಶಿಧರ ಶೆಟ್ಟಿ, ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಚಿದಾನಂದ ಇಡ್ಯ, ಹಿರಿಯರಾದ ಶಂಕರ್ ಗಾಣಿಗ ಗುಂಪಲಾಜೆ ಉಪಸ್ಥಿತರಿದ್ದು.

ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ರಾಮ್ ಪ್ರಸಾದ್ ಎನ್.ಎಸ್, “ಸಮೃದ್ದಿ” ಗುಂಪಲಾಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಮಿಯಿಯ ಕೋಶಾಧಿಕಾರಿ ಪ್ರೇಮ್ ನಾಥ್ ಶೆಟ್ಟಿ, ರಂಜಿತ್ ಸಪಲ್ಯ, ಸತೀಶ್ ಗೌಡ, ಲೋಕೇಶ್ ಆಚಾರ್ಯ, ನೋಣಯ್ಯ ಗೌಡ, ಹರೀಶ್ ಗೌಡ, ಸತೀಶ್ ಕುಲಾಲ್ ನಾಗಚಾವಡಿ, ಶಶಿಧರ ಹೆಗ್ಡೆ, ಧನಂಜಯ ಶೆಟ್ಟಿ, ಚಂದ್ರಶೇಖರ ಕುಲಾಲ್, ಲೋಕೇಶ್ ಗೌಡ, ಆಶಾ, ಶಶಿಕಲಾ, ನಳಿನಿ, ರಮ್ಯ, ಗೋಪಿಕಾ, ದಿಶ್ಮಿತಾ , ಕಾರ್ಯಕ್ರಮಕ್ಕೆ ಸಹಕರಿಸಿದರು.

 

ಇದನ್ನೂ ಓದಿ:

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ: “ಪಾಂಚಜನ್ಯ”ವಿಶೇಷ ಕಾರ್ಯಕ್ರಮಕ್ಕೆ ಚಾಲನೆ: ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಉದ್ಯಮಿ ಶಶಿಧರ್ ಶೆಟ್ಟಿ:

 

 

error: Content is protected !!