ನವದೆಹಲಿ : ಭಾರತೀಯ ಟೆಲಿಕಾಂ ಕಂಪನಿಗಳು ಜನರಿಗೆ ಬಿಗ್ ಶಾಕ್ ನೀಡುವ ಸಾಧ್ಯತೆ ಇದೆ.
ಶೀಘ್ರದಲ್ಲಿ ಮೊಬೈಲ್ ಕರೆ ಮತ್ತು ಡೇಟಾ ಪ್ಯಾಕ್ ದರ ಹೆಚ್ಚಳ ಮಾಡಲು ನಿರ್ಧರಿಸಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಟೆಲಿಕಾಂ ಕಂಪನಿಗಳು 2 ವರ್ಷಗಳ ಬಳಿಕ ದರ ಹೆಚ್ಚಳಕ್ಕೆ ಮುಂದಾಗಿದ್ದು, ಶೇ.20 ರಷ್ಟು ದರ ಹೆಚ್ಚಳ ಮಾಡಲು ಮುಂದಾಗಿವೆ.
ವೋಡಾಫೋನ್ ಐಡಿಯಾ, ಏರ್ ಟೆಲ್, ಜಿಯೋ ಸೇರಿದಂತೆ ಇತರೆ ಟೆಲಿಕಾಂ ಕಂಪನಿಗಳ ದರ ಹೆಚ್ಚಳವಾಗಲಿದ್ದು ಟೆಲಿಕಾಂ ಉದ್ಯಮಕ್ಕೆ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ ಎಂದು ತಿಳಿಸಲಾಗಿದೆ.
ಸದ್ಯಕ್ಕಿರುವ ರಿಚಾರ್ಜ್ ಪ್ಯಾಕ್ ಗಳ ದರ ಹೆಚ್ಚಳವಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿರುವಾಗಲೇ ಮತ್ತೆ ದರ ಹೆಚ್ಚಳವಾಗುತ್ತಿರುವುದು ಮೊಬೈಲ್ ಬಳಕೆದಾರರಿಗೆ ಬಿಸಿ ಮುದ್ದೆ ಬಾಯಲ್ಲಿ ಇಟ್ಟುಕೊಂಡಂತಾಗಲಿದೆ. ಈ ಮಧ್ಯೆ ಹಳ್ಳಿ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆಗಳು ಹೆಚ್ಚಾಗಿದ್ದು, ಫೋನ್ ಕರೆಗಳು ಸಂಪರ್ಕವಾಗುತ್ತಿಲ್ಲ. ತುರ್ತಾದ ಮಾಹಿತಿ ರವಾನಿಸಲು ಸಾಧ್ಯವಾಗುತ್ತಿಲ್ಲ. ಸರಿಯಾಗಿ ನೆಟ್ವರ್ಕ್ ನೀಡದ ಟೆಲಿಕಾಂ ಕಂಪನಿಗಳು ನಿರಂತರವಾಗಿ ಪ್ಯಾಕ್ ದರಗಳನ್ನು ಏರಿಸುತ್ತಿದೆ ಎಂದು ಹಳ್ಳಿ ಜನ ಕಿಡಿಕಾರಿದ್ದಾರೆ.