ಬೆಳ್ತಂಗಡಿ: ಹೆದ್ದಾರಿ ಬದಿಯಲ್ಲಿದೆ ಡೇಂಜರ್ ಗೋಡೆ..! ಪಾದಾಚಾರಿಗಳ ಮೇಲೆ ಬಿದ್ದರೆ ಪ್ರಾಣಕ್ಕೆ ಸಂಚಕಾರ..! ಇತ್ತ ಗಮನ ಹರಿಸಬೇಕಾಗಿದೆ ಅಧಿಕಾರಿಗಳು..

 

 

ಬೆಳ್ತಂಗಡಿ: ದಿನನಿತ್ಯ ಶಾಲಾ ಮಕ್ಕಳು ಸೇರಿದಂತೆ ಸಾವಿರಾರು ಮಂದಿ ನಡೆದುಕೊಂಡು ಹೋಗುವ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಗೋಡೆಯೊಂದು ಭಾರೀ ಅಪಾಯ ಸೃಷ್ಟಿಸುವ ಎಲ್ಲಾ ಲಕ್ಷಣ ಗೋಚರವಾಗಿದೆ.

ಬೆಳ್ತಂಗಡಿ ತಾಲೂಕಿನ ನಗರದ ಮೂರು ಮಾರ್ಗದ ಬಳಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹಳೆಯ ಶಿಥಿಲಗೊಂಡ ಕಟ್ಟಡವೊಂದರ ಗೋಡೆ ಸಂಪೂರ್ಣ ರಸ್ತೆ ಬದಿಗೆ ವಾಲಿದ್ದು ಯಾವಾಗ ಬೇಕಾದರೂ ಉರುಳಿ ಬೀಳುವ ಅಪಾಯವಿದ್ದು ಈ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳು ಗಮನವಹಿಸಬೇಕಾಗಿದೆ.

 

 

 

ಬೆಳಗ್ಗೆ ಮತ್ತು ಸಂಜೆ ಅತ್ಯಧಿಕ ಸಂಖ್ಯೆಯಲ್ಲಿ ಶಾಲಾ ಮಕ್ಕಳು ಸೇರಿದಂತೆ ನೂರಾರು ಜನ ಇದರ ಬದಿಯಲ್ಲೇ ನಡೆದುಕೊಂಡು ಹೋಗುತ್ತಾರೆ. ಅಲ್ಲದೆ ಸೋಮವಾರ ಬೆಳ್ತಂಗಡಿಯಲ್ಲಿ ಸಂತೆ ಇರುವುದರಿಂದ ಮತ್ತಷ್ಟು ಜನರು ಈ ಅಪಾಯದ ಸಮೀಪದಿಂದಲೇ ಹಾದು ಹೋಗುತ್ತಾರೆ. ಈಗಾಗಲೆ ಸಂಪೂರ್ಣ ಶಿಥಿಲಗೊಂಡಿರುವ ಈ ಕಟ್ಟಡ ಉರುಳಿ ಬಿದ್ದಲ್ಲಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ.
ಈಗಾಗಲೇ ರಾಷ್ಟೀಯ ಹೆದ್ದಾರಿ ಕಾಮಗಾರಿ ಕೆಲಸ ಪ್ರಾರಂಭವಾಗಿದ್ದು ರಸ್ತೆ ಅಗಲೀಕರಣದ ವೇಳೆ ಈ ಕಟ್ಟಡ ತೆರವುಗೊಳ್ಳುವುದಿದ್ದರೂ ಅದಕ್ಕಿಂತ ಮುಂಚೆ ಎಲ್ಲಿಯಾದರೂ ಕುಸಿದು ಬಿದ್ದು ಅಪಾಯ ಸಂಭವಿಸಿದರೆ ಅದಕ್ಕೆ ಹೊಣೆ ಯಾರು ಎಂಬುವುದೇ ದೊಡ್ಡ ಪ್ರಶ್ನೆಯಾಗಿದೆ. ಆದ್ದರಿಂದ ಸಾರ್ವಜನಿಕರಿಗೆ, ಮಕ್ಕಳಿಗೆ ಅಪಾಯ ಆಗದಂತೆ, ಈ ಗೋಡೆಯನ್ನು ಹಾಗೂ ಅದರಲ್ಲಿ ಇರುವ ಕಬ್ಬಿಣದ ಶಟರ್ ಗಳನ್ನು ತೆರವುಗೊಳಿಸಲು ತಕ್ಷಣ ಕ್ರಮ ಕೈಗೊಂಡು ಅನಾಹುತ ತಪ್ಪಿಸಬೇಕಿದೆ.

error: Content is protected !!