ಉಜಿರೆ: ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿನಿ ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯಾಟಕ್ಕೆ ಆಯ್ಕೆ

ಉಜಿರೆ: ಎಸ್.ಡಿ.ಎಂ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಚಂದ್ರಿಕಾ (20) ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

2023-24 ಸಾಲಿನ ಮಂಗಳೂರು ಯೂನಿವರ್ಸಿಟಿ ತಂಡವನ್ನು ಪ್ರತಿನಿಧಿಸಿ ಡಿ.28 ರಂದು ಕ್ಯಾಲಿಕಟ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಸೌತ್ ಝೋನ್ ಫುಟ್ಬಾಲ್ ಗೇಮ್ ನಲ್ಲಿ ಭಾಗವಹಿಸಲಿದ್ದಾರೆ.

ಕ್ರೀಡಾಪಟು ಚಂದ್ರಿಕಾ ಸಾಧನೆ..

2022-23ಸಾಲಿನಲ್ಲಿ ಉಡುಪಿಯಲ್ಲಿ ನಡೆದ ಮಂಗಳೂರು ಯೂನಿವರ್ಸಿಟಿ ಗೇಮ್‍ನಲ್ಲಿ 400 MTR ಹರ್ಡಲ್ಸ್ ನಲ್ಲಿ ದ್ವಿತೀಯ ಸ್ಥಾನ ಮತ್ತು 4.400 MTR ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

2022-23 ಸಾಲಿನಲ್ಲಿ ಮೈಸೂರು ದಸರಾ ಕ್ರೀಡಾಕೂಟದಲ್ಲಿ ಭಾಗವಹಿದ್ದಾರೆ.

2023-24 ಸಾಲಿನಲ್ಲಿ ಮಂಗಳೂರಿನಲ್ಲಿ ನಡೆದ ಮಂಗಳೂರು ಯೂನಿವರ್ಸಿಟಿ ರೇಸಿಂಗ್ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

error: Content is protected !!