ಹೊಸದಿಲ್ಲಿ: ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸಂವಿಧಾನದ ವಿಧಿ 370 ರದ್ದುಗೊಳಿಸಿದ್ದರ ಕುರಿತು ಸುಪ್ರೀಂ ಕೋರ್ಟ್ ಇಂದು (ಡಿ.11) ನೀಡಿದ ಐತಿಹಾಸಿಕ ತೀರ್ಪನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಸಂತೋಷದಿಂದ ಶ್ಲಾಘಿಸಿದ್ದಾರೆ.
“ಇದು ಕೇವಲ ಕಾನೂನಾತ್ಮಕ ತೀರ್ಪಲ್ಲ, ಇದು ಭರವಸೆಯ ಬೆಳಕು, ಉಜ್ವಲ ಭವಿಷ್ಯದ ಆಶ್ವಾಸನೆ ಮತ್ತು ಹೆಚ್ಚು ಬಲಿಷ್ಠವಾದ ಮತ್ತು ಏಕತೆಯ ಭಾರತವನ್ನು ನಿರ್ಮಿಸುವ ನಮ್ಮ ಸಾಮೂಹಿಕ ನಿರ್ಧಾರದ ಪ್ರತೀಕವಾಗಿದೆ” ಎಂದಿದ್ದಾರೆ.
ಜಮ್ಮು ಕಾಶ್ಮೀರ ಮತ್ತು ಲಡಾಖ್‍ನ ಜನರಿಗೆ “ಆಶಾವಾದ, ಪ್ರಗತಿ ಮತ್ತು ಏಕತೆಯನ್ನು ಪ್ರತಿನಿಧಿಸುವ ಘೋಷಣೆಯಾಗಿದೆ, ನಿಮ್ಮ ಆಶಾವಾದಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ, ನಿಮ್ಮ ಕನಸುಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಮತ್ತು ಪ್ರಗತಿಯ ಪ್ರತಿಫಲಗಳು ನಿಮಗೆ ತಲುಪುವಂತೆ ಹಾಗೂ ವಿಧಿ 370 ಯಿಂದಾಗಿ ತೊಂದರೆಗೊಳಗಾದ ದುರ್ಬಲ ವರ್ಗಗಳಿಗೂ ಎಲ್ಲಾ ಪ್ರಯೋಜನಗಳು ದೊರೆಯುವಂತಾಗಲು ನಾವು ಬದ್ಧರಾಗಿದ್ದೇವೆ,” ಎಂದು ಪ್ರಧಾನಿ ತಿಳಿಸಿದ್ದಾರೆ.