ಸಿಯಾಚಿನ್ ಗ್ಲೇಸಿಯರ್ ನ ಅತೀ ಎತ್ತರದ ಪ್ರದೇಶದಲ್ಲಿ ಕಾರ್ಯಚರಣಾ ಹುದ್ದೆಗೆ ಮಹಿಳಾ ಕ್ಯಾಪ್ಟನ್ ಫಾತಿಮಾ ವಾಸಿಮ್ ಪ್ರಪ್ರಥಮ ಆಯ್ಕೆ..!

ನವದೆಹಲಿ: ಭಾರತೀಯ ವಾಯುಪಡೆಯು ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾದ ಉತ್ತರ ಭಾರತದ ಸಿಯಾಚಿನ್ ಗ್ಲೇಸಿಯರ್ ನಲ್ಲಿ ಕಾರ್ಯಚರಣಾ ಹುದ್ದೆಗೆ ಮಹಿಳಾ ಕ್ಯಾಪ್ಟನ್ ಫಾತಿಮಾ ವಾಸಿಮ್ ಅವರನ್ನು ಆಯ್ಕೆ ಮಾಡಿದ್ದು, ಈ ಮೂಲಕ ಈ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳಾ ವೈದ್ಯಕೀಯ ಅಧಿಕಾರಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ಸಿಯಾಚಿನ್ ಗ್ಲೇಸಿಯರ್ ನ ಎತ್ತರ 20,062 ಅಡಿ. ಆದರೆ ಕ್ಯಾಪ್ಟನ್ ಫಾತಿಮಾ ವಾಸಿಮ್ ಅವರನ್ನು 15,200 ಅಡಿ ಎತ್ತರದಲ್ಲಿ ನಿಯೋಜಿಸಲಾಗಿದೆ. ಇದು ಇಂಡೋ-ಪಾಕ್ ನಿಯಂತ್ರಣ ರೇಖೆಯ ಸಮೀಪದಲ್ಲಿದ್ದು ಭಾರತದ ಅತಿದೊಡ್ಡ ಮತ್ತು ವಿಶ್ವದ ಎರಡನೇ ಅತಿದೊಡ್ಡ ಹಿಮನದಿ ಇಲ್ಲಿಯೇ ಹರಿಯುತ್ತಿದೆ.

error: Content is protected !!