ಜನಜಾತ್ರೆಯಾದ ಉಜಿರೆಯ ಯಕ್ಷ ಸಂಭ್ರಮ-2023: ಸಾಧಕರಿಗೆ ಪ್ರಶಸ್ತಿ ಪ್ರದಾನ, ಸನ್ಮಾನ: ರೋಮಾಂಚನಗೊಳಿಸಿದ 10 ಮೈಸಾಸುರರ ಸಭಾ ಪ್ರವೇಶದ ಸನ್ನಿವೇಶ

ಉಜಿರೆ: ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ ದೇಶದ ಹೆಸರನ್ನು ಜಗತ್ತಿಗೆ ಪಸರಿಸಬೇಕು, ಪ್ರತೀಯೊಬ್ಬರು ತಾಯಿನಾಡಿನ ಮಣ್ಣನ್ನು ಪ್ರೀತಿಸಬೇಕು, ಮಾನವೀಯ ಶಿಕ್ಷಣ ಕರಾವಳಿಯಲ್ಲಿ ಮಾತ್ರ ಸಿಗುವುದು, ಇಲ್ಲಿ ನಡೆಯುವ ಯಕ್ಷಗಾನ ನೈಜ ಅರ್ಥದಲ್ಲಿ ಸಮಾನತೆ, ಶಾಂತಿ ಮತ್ತು ಸೌಹಾರ್ದವನ್ನು ಪ್ರತಿಬಿಂಬಿಸುತ್ತದೆ ಎಂದು ಜಮ್ಮು ಕಾಶ್ಮೀರ ಸರ್ಕಾರದ ಪ್ರಿನ್ಸಿಪಲ್ ಸೆಕ್ರಟರಿ ಹಿರಿಯಡ್ಕ ರಾಜೇಶ್ ಪ್ರಸಾದ್ ಹೇಳಿದ್ದಾರೆ.

ಅವರು ಡಿ.02ರಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಠಾರದಲ್ಲಿ ಯಕ್ಷ ಧ್ರುವ ಪಟ್ಲ ಫೌಂಟೇಶನ್ ಮಂಗಳೂರು (ರಿ.) ಬೆಳ್ತಂಗಡಿ ಘಟಕದ ವತಿಯಿಂದ ನಡೆದ ಯಕ್ಷ ಸಂಭ್ರಮ – 2023 ಕಾರ್ಯಕ್ರಮದಲ್ಲಿ, ದೇವಿ ಮಹಾತ್ಮೆ ಯಕ್ಷಗಾನ ಅಂದಿನ ಯುದ್ದ ಆಗಿರಬಹುದು. ಆದರೆ ಈ ಯಕ್ಷಗಾನ ನೋಡಿದ ಬಳಿಕ ನಮ್ಮ ಅಂತರಾತ್ಮದೊಳಗೂ ಯುದ್ದಗಳಾಗಿ ನಮ್ಮಲ್ಲಿ ಸತ್ಯ, ನ್ಯಾಯ, ಧರ್ಮದ ವಿಜಯಗಳಾಗಬೇಕು ತುಳು ಭಾಷೆಯಲ್ಲಿ ತಮ್ಮ ಮನದಾಳ ಮಾತುಗಳನ್ನಾಡಿದರು.


ಯಕ್ಷ ಧ್ರುವ ಪಟ್ಲ ಫೌಂಟೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಪಾವಂಜೆ ಮೇಳದಿಂದ ಕಾಶ್ಮೀರದಲ್ಲಿ ಯಕ್ಷಗಾನ ನಡೆದಿದೆ. ಈ ಬಾರಿ ನವರಾತ್ರಿ ಸಂದರ್ಭದಲ್ಲಿ ಶ್ರೀ ಮಾತಾ ವೈಷ್ಣೋದೇವಿ ದೇವಸ್ಥಾನದಲ್ಲೂ ಯಕ್ಷಗಾನ ಮಾಡಲು ಅವಕಾಶ ಸಿಕ್ಕಿದೆ. ಇದಕ್ಕೆ ಕಾರಣಕರ್ತರಾದ ಜಮ್ಮು ಕಾಶ್ಮೀರ ಸರ್ಕಾರದ ಪ್ರಿನ್ಸಿಪಲ್ ಸೆಕ್ರಟರಿ ಹಿರಿಯಡ್ಕ ರಾಜೇಶ್ ಪ್ರಸಾದ್ ಅವರಿಗೆ ಧನ್ಯವಾದ. ಪಟ್ಲ ಫೌಂಡೇಶನ್ ವತಿಯಿಂದ 8 ವರ್ಷದಲ್ಲಿ ಅಶಕ್ತರಿಗೆ 11 ಕೋಟಿ ಗೂ ಅಧಿಕ ರೂ.ಗಳ ಸಹಕಾರ ನೀಡಿದ್ದೇವೆ. ಇದಕ್ಕೆ ಬೆನ್ನೆಲುಬಾಗಿ ನಿಂತ ಮಹಾನ್ ದಾನಿಗಳಿಗೆ ಅಭಿನಂದನೆ. ಯಕ್ಷಗಾನದ ಚೌಕಿ ಪೂಜೆಗೆ 5 ಸಾವಿರಕ್ಕೂ ಅಧಿಕ ಮಂದಿ ಸೇರಿದ್ದು ಇದೇ ಮೊದಲ ಬಾರಿ. ಈ ಮೂಲಕ ಉಜಿರೆಯ ಯಕ್ಷ ಸಂಭ್ರಮ ಒಂದು ಇತಿಹಾಸ ನಿರ್ಮಿಸಿದೆ ಎಂದರು.

ಯಕ್ಷ ಧ್ರುವ ಪಟ್ಲ ಫೌಂಟೇಶನ್ ಬೆಳ್ತಂಗಡಿ ಘಟಕದ ಗೌರವಾಧ್ಯಕ್ಷ ಉದ್ಯಮಿ ಶಶಿಧರ ಶೆಟ್ಟಿ ಬರೋಡ ಮಾತನಾಡಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭಹಾರೈಸಿದರು.

ಯಕ್ಷ ಸಂಭ್ರಮ 2023 ಪ್ರಶಸ್ತಿ ಪ್ರದಾನ

ಯಕ್ಷಗಾನ ಭಾಗವತ ಮೋಹನ್ ಕುಮಾರ್ ಬೈಪಡಿತ್ತಾಯ, ಯಕ್ಷಗಾನ ಕಲಾವಿದ ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಹಾಗೂ ಕೃಷಿಕ ಬಿ.ಕೆ ದೇವರಾವ್ ಅಮೈ ಮಿತ್ತಬಾಗಿಲು ಅವರಿಗೆ ಯಕ್ಷ ಸಂಭ್ರಮ 2023 ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗೌರವ ಸನ್ಮಾನ : ಸಮಾಜ ಸೇವೆಯಲ್ಲಿ ಗುರುತಿಸಿಕೊಂಡ ಶ್ರೀ ಲಕ್ಷ್ಮೀ ಗ್ರೂಪ್ ಉಜಿರೆ ಮಾಲಕ ಮೋಹನ್ ಕುಮಾರ್, ಭರತ್ ಕುಮಾರ್ ಉಜಿರೆ, ಹಾಗೂ ಉದ್ಯಮ ಕ್ಷೇತ್ರದಲ್ಲಿ ಅರ್ಚನಾ ರಾಜೇಶ್ ಪೈ ಉಜಿರೆಯವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಮೆರುಗು : ಸಂಜೆ 5 ಗಂಟೆಯಿಂದ ಉಜಿರೆ ಓಶಿಯನ್ ಪರ್ಲ್ ನಿಂದ 22 ಭಜನಾ ತಂಡಗಳ ಸಾವಿರಕ್ಕೂ ಅಧಿಕ ಭಜಕರಿಂದ ಕುಣಿತ ಭಜನೆ, ಚೆಂಡೆ, ಕೊಂಬು ಸ್ಯಾಕ್ಸೋಫೋನ್, ಸುಡುಮದ್ದು ಪ್ರದರ್ಶನದೊಂದಿಗೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಠಾರದವರೆಗೆ ಭವ್ಯ ಮೆರವಣಿಗೆ ಸಾಗಿತು. ಬಳಿಕ ಸಾರ್ವಜನಿಕರು 20ಕ್ಕೂ ಹೆಚ್ಚು ಬಗೆಯ ಖಾದ್ಯಗಳನ್ನು ಸವೆದರು. 10 ಮೈಸಾಸುರರ ಬಾಲಲೀಲೆಯ ಆಟ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಈ ರೋಮಾಂಚನಕಾರಿ ಸನ್ನಿವೇಶವನ್ನು ಸಹಸ್ರ ಸಹಸ್ರ ಸಂಖ್ಯೆಯಲ್ಲಿ  ಜನರು ಕಣ್ತುಂಬಿಕೊಂಡಿದ್ದಾರೆ.

error: Content is protected !!