ಚಾರ್ಮಾಡಿಯಲ್ಲಿ ಕಾಡುಪ್ರಾಣಿ ಬೇಟೆ: ಬೆಳ್ತಂಗಡಿ ಅರಣ್ಯಾಧಿಕಾರಿಗಳ ನೇತೃತ್ವದ ತಂಡ ದಾಳಿ:

 

 

 

 

ಬೆಳ್ತಂಗಡಿ : ಕಾಡುಪ್ರಾಣಿ ಬೇಟೆಯಾಡಿ ಮಾಂಸ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಅರಣ್ಯಾಧಿಕಾರಿಗಳ ತಂಡ ದಾಳಿ ಮಾಡಿದೆ. ದಾಳಿ ವೇಳೆ ಮಾಂಸ ಸಹಿತ ಇಬ್ಬರು ಆರೋಪಿಗಳು ಪರಾರಿಯಾಗಿರುವ ಘಟನೆ  ಚಾರ್ಮಾಡಿಯಲ್ಲಿ ನ.13 ರಂದು ಸಂಜೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಹೊಸಮಠ ಎಂಬಲ್ಲಿಯ  ಮನೆಯೊಂದರಲ್ಲಿ ಕಾಡುಪ್ರಾಣಿ ಬೇಟೆಯಾಡಿ ಮಾಂಸ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಅರಣ್ಯಾಧಿಕಾರಿ ಮೋಹನ್ ಕುಮಾರ್ ನೇತೃತ್ವದ ತಂಡ ಇಂದು ಸಂಜೆ 5 ಗಂಟೆ ಸುಮಾರಿಗೆ ದಾಳಿ ಮಾಡಿದ್ದು ಈ ವೇಳೆ ಆರೋಪಿ ಗಿರೀಶ್.ಎಮ್.ಆರ್ ಮತ್ತು ಬಿಜು ಎಂಬಾತ ಮಾಂಸ ಸಮೇತ ಹಿಡಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಮನೆ ಹಿಂಭಾಗದಲ್ಲಿ ಮಾಂಸ ಮಾಡಲು ಉಪಯೋಗಿಸಿದ ಒಂದು ಬುಟ್ಟಿ , ಗೋಣಿ ಚೀಲಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದು. ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

 

ಬೆಳ್ತಂಗಡಿ ಅರಣ್ಯಾಧಿಕಾರಿ ಮೋಹನ್ ಕುಮಾರ್ , ಡಿ.ಆರ್.ಎಫ್.ಓ ರವೀಂದ್ರ ಅಂಕಲಾಗಿ,ಡಿ.ಆರ್.ಎಫ್.ಓ ರವೀಂದ್ರ.ಕೆ ,ಡಿ.ಆರ್.ಎಫ್.ಓ ಪೂಜಾ,ಗಸ್ತು ಅರಣ್ಯ ಪಾಲಕ ಅಖಿಲೇಶ್, ಸತೀಶ್, ಪಾಂಡುರಂಗ ಕಮತಿ, ಸಂತೋಷ್.ಬಿ, ವಾಹನ ಚಾಲಕ ಕುಶಾಲಪ್ಪ ಗೌಡ, ಗೃಹರಕ್ಷಕ ದಳದ ಸಿಬ್ಬಂದಿ ಸೌಮ್ಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

error: Content is protected !!