2 ಸಾವಿರ ರೂ. ನೋಟುಗಳ ಠೇವಣಿ /ಬದಲಾವಣೆಗೆ ಹೊಸ ರೂಲ್ಸ್…!

 

ಮುಂಬೈ: 2,000 ರೂಪಾಯಿ ನೋಟುಗಳ ಬದಲಾವಣೆಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತಷ್ಟು ಅವಕಾಶ ನೀಡಿದೆ.

2000ರೂ ನೋಟುಗಳನ್ನು ಹಿಂಪಡೆಯುವ ಅಕ್ಟೋಬರ್ 7 ರವರೆಗೆ ಕೇಂದ್ರೀಯ ಬ್ಯಾಂಕ್ ಅವಕಾಶ ನೀಡಿತ್ತು. ಈ ದಿನಾಂಕದವರೆಗೆ ಸಾರ್ವಜನಿಕರು ನೋಟುಗಳನ್ನು ಠೇವಣಿ ಮಾಡಬಹುದು ಅಥವಾ ಬದಲಾಯಿಸಬಹುದು ಎಂದಿತ್ತು. ಆದರೆ ಇದೀಗ, ಈ ಗಡುವಿನ ನಂತರವೂ 2 ಸಾವಿರ ರೂಪಾಯಿ ನೋಟುಗಳು ಕಾನೂನುಬದ್ಧವಾಗಿ ಮಾನ್ಯವಾಗಿರುತ್ತವೆ ಎಂದು ಸ್ಪಷ್ಟಪಡಿಸಿದೆ.

ಇಲ್ಲಿ ಗಮನಿಸಬೇಕಾದ ನಿಯಮ ಎಂದರೆ ಆರ್‌ಬಿಐ ವಿತರಣಾ ಕಚೇರಿಗಳಲ್ಲಿ ಮಾತ್ರ ಅ.07ರ ನಂತರ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು ಅಥವಾ ಠೇವಣಿ ಇಡಬಹುದು ಎಂದಿದೆ. ಯಾವುದೇ ಬ್ಯಾಂಕ್ ಶಾಖೆಯಲ್ಲಿ ನೋಟುಗಳನ್ನು ಠೇವಣಿ ಮಾಡಲು/ಬದಲಾಯಿಸಲು ಸಾಧ್ಯವಿಲ್ಲ ಎಂಬುದು ಗಮನಾರ್ಹವಾಗಿದೆ.

ಆರ್‌ಬಿಐ ವಿತರಣಾ ಕಚೇರಿಗಳಲಿ ವಿನಿಮಯ ಹೇಗೆ: ಆರ್‌ಬಿಐ ವಿತರಣಾ ಕಚೇರಿಗಳಲ್ಲಿ ಗ್ರಾಹಕರು ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಇದಕ್ಕಾಗಿ ನೋಟುಗಳನ್ನು ಭಾರತೀಯ ಅಂಚೆ ಮೂಲಕ ಆಯಾ ಆರ್‌ಬಿಐ ಕಚೇರಿಗಳಿಗೆ ಕಳುಹಿಸಬೇಕು. ಒಂದು ಬಾರಿಗೆ ಗರಿಷ್ಠ 20ಸಾವಿರ ರೂಪಾಯಿಯವರೆಗೆ ಮಾತ್ರ ಸಾಧ್ಯವಿದೆ. ಅಂದರೆ ಗ್ರಾಹಕರು ಒಂದೇ ಬಾರಿಗೆ ರೂ.20,000ಕ್ಕಿಂತ ಹೆಚ್ಚು ಮೌಲ್ಯದ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವಂತಿಲ್ಲ/ಠೇವಣಿ ಇಡುವಂತಿಲ್ಲ. ಒಬ್ಬ ವ್ಯಕ್ತಿ/ಕಂಪನಿಯು ತಮ್ಮ 2000 ರೂ ಮುಖಬೆಲೆಯ ನೋಟುಗಳನ್ನು ವಿತರಣಾ ಕಚೇರಿಯಲ್ಲಿ ಠೇವಣಿ ಮಾಡಿದಾಗ ಅಗತ್ಯವಿದ್ದಲ್ಲಿ ಅವರು ಗುರುತಿನ ದಾಖಲೆ ಸಲ್ಲಿಸಬೇಕಾಗುತ್ತದೆ.

19 ಮೇ 2023ರಂದು ಈ ನೋಟುಗಳ ಅಮಾನ್ಯೀಕರಣದ ವೇಳೆಗೆ ದೇಶದಲ್ಲಿ 3.56 ಲಕ್ಷ ಕೋಟಿ ರೂ ಮೌಲ್ಯದ ನೋಟುಗಳು ಚಲಾವಣೆಯಲ್ಲಿದ್ದವು. ಆದರೆ ಈಗ 10,000 ಕೋಟಿ ನೋಟುಗಳು ಮಾತ್ರ ಚಲಾವಣೆಯಲ್ಲಿವೆ. ಶೇ 97ಕ್ಕಿಂತ ಹೆಚ್ಚು ನೋಟುಗಳು ಮರಳಿವೆ ಎಂದು ಅಪೆಕ್ಸ್ ಬ್ಯಾಂಕ್ ಮಾಹಿತಿ ನೀಡಿದೆ.

error: Content is protected !!