‘ವಿಶ್ವ ಮಟ್ಟದಲ್ಲಿ ಕೊನೆಯ ಸಾಲಿನಲ್ಲಿದ್ದ ಭಾರತ ಇಂದು ಮೊದಲ ಸಾಲಿನಲ್ಲಿದೆ: ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ಗೌರವ ತಂದುಕೊಟ್ಟಿದ್ದಾರೆ’: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ಮತದಾರರ ಚೇತನ ಅಭಿಯಾನದ ಪ್ರಯುಕ್ತ ಬಿ.ಎಲ್.ಎ. – 2ಗಳ ಕಾರ್ಯಾಗಾರ ಬೆಳ್ತಂಗಡಿ ಎಸ್.ಡಿ.ಎಂ ಹಾಲ್ ನ ಪಿನಾಕಿ ಸಭಾಭವದಲ್ಲಿ ಸೆ.26ರಂದು ನಡೆಯಿತು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ, 10 ವರ್ಷಗಳ ಹಿಂದೆ ವಿಶ್ವ ಮಟ್ಟದಲ್ಲಿ ಕೊನೆಯ ಸಾಲಿನಲ್ಲಿದ್ದ ಭಾರತ ಇಂದು ಮೊದಲ ಸಾಲಿನಲ್ಲಿ ನಿಲ್ಲುವಂತಹ ಗೌರವವನ್ನು ತಂದುಕೊಟ್ಟದ್ದು ಬಿಜೆಪಿ ನೇತೃತ್ವದ ಸರ್ಕಾರದ ಪ್ರಧಾನಿ ನರೇಂದ್ರ ಮೋದಿಯವರು. ಅವರ ಅಡಳಿತದಿಂದ ಇಂದು ಯಾವುದೇ ಅಂತರಾಷ್ಟಿçÃಯ ಒಪ್ಪಂದಗಳು ಅದು ಭಾರತದ ತೀರ್ಮಾನದ ಮೇಲೆ ನಡೆಯುವಂತಾಗಿದೆ. ಅದಕ್ಕೆ ಬಿಜೆಪಿ ನೇತೃತ್ವದ ಸರಕಾರ ಕಾರಣವಾಗಿದೆ ಎಂಬುದು ಬಿಜೆಪಿ ಕಾರ್ಯಕರ್ತರಿಗೆ ಹೆಮ್ಮೆ ಎಂದರು.

ಸಮಾರೋಪ ಮಾತುಗಳನ್ನಾಡಿದ ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬದ್ದತೆಯೇ ಬಿಜೆಪಿ ಕಾರ್ಯಕರ್ತರ ಧ್ಯೇಯ. ನಾವು ಬದ್ದತೆಯಿಂದ ನಮ್ಮ ಕೆಲಸವನ್ನು ಮಾಡುವ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಈ ದೇಶದ ಪ್ರಧಾನಿಯಾಗುವಲ್ಲಿ ಕೆಲಸವನ್ನು ಮಾಡಬೇಕಿದೆ ಎಂದರು.
ಮತದಾರರ ಚೇತನ ಅಭಿಯಾನದ ಜಿಲ್ಲಾ ಸಂಚಾಲಕ ದೇವದಾಸ್ ಶೆಟ್ಟಿ ಬಂಟ್ವಾಳ ಮತದಾರರ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮಿಜನಾರ್ದನ್, ಉಪಸ್ಥಿತರಿದ್ದರು.
ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಸ್ವಾಗತಿಸಿದರು. ಮಂಡಲ ಉಪಾಧ್ಯಕ್ಷ ಸೀತಾರಾಮ ಬಿ.ಎಸ್. ವಂದಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್ ಕಾರ್ಯಕ್ರಮ ನಿರೂಪಿಸಿದರು

error: Content is protected !!