ಬೆಳ್ತಂಗಡಿ ಗೃಹರಕ್ಷಕದಳ ಘಟಕಾಧಿಕಾರಿ ಜಯಾನಂದರ ಮುಡಿಗೇರಿದ ‘ಮುಖ್ಯಮಂತ್ರಿ ಚಿನ್ನದ ಪದಕ

ಬೆಳ್ತಂಗಡಿ: ತಾಲೂಕು ಗೃಹರಕ್ಷಕ ದಳದಲ್ಲಿ ಘಟಕಾಧಿಕಾರಿಯಾಗಿ ಕಳೆದ 33 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಜಯಾನಂದ ಅವರಿಗೆ 2021, 2022, 2023ನೇ ಸಾಲಿನ ‘ಮುಖ್ಯಮಂತ್ರಿ ಚಿನ್ನದ ಪದಕ’ ಗೌರವ ಪ್ರಶಸ್ತಿ ಲಭಿಸಿದೆ.

 

ಸೆ.22ರಂದು ಬೆಂಗಳೂರಿನ ಆರ್.ಎ ಮುಂಡ್ಕುರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತರಬೇತಿ ಅಕಾಡೆಮಿ ಬನ್ನೇರುಘಟ್ಟದಲ್ಲಿ ನಡೆದ ಸಮಾರಂಭದಲ್ಲಿ ಗೃಹ ಸಚಿವ ಡಾ. ಪರಮೇಶ್ವರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಜಯಾನಂದ ಅವರು ಬೆಳ್ತಂಗಡಿ ತಾಲೂಕು ಪಂಚಾಯತ್‌ನ ಸಂಯೋಜಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದು ವಿವಿಧ ಚಟುವಟಿಕೆಗಳಲ್ಲಿ ಸಕ್ರೀಯರಾಗಿ ಸಾಧನೆ ಮಾಡಿದ್ದಾರೆ.

error: Content is protected !!