26 ಗಂಟೆ ಸ್ಯಾಕ್ಸೋಫೋನ್ ನುಡಿಸಿ ವರ್ಲ್ಡ್ ರೆಕಾರ್ಡ್ : ಸಾಧನೆಯ ಶಿಖರವನ್ನೇರಿದ 7 ತಿಂಗಳ ಗರ್ಭಿಣಿ..!


ಬೆಂಗಳೂರು:
ಸತತ 26 ಗಂಟೆ ಸ್ಯಾಕ್ಸೋಫೋನ್ ನುಡಿಸಿ 7 ತಿಂಗಳ ಗರ್ಭಿಣಿಯೊಬ್ಬರು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸಮೀಪದ ಆವಲಹಳ್ಳಿ ಸುಬ್ಬಲಕ್ಷ್ಮೀ  3ತಿಂಗಳ ಗರ್ಭಿಣಿಯಿದ್ದಾಗ 20 ಗಂಟೆಗಳ ಕಾಲ ಸ್ಯಾಕ್ಸೋಫೋನ್ ನುಡಿಸಿ ಗಿನ್ನಿಸ್ ದಾಖಲೆಯಿಂದ ವಂಚಿತರಾಗಿದ್ದರು. ಆದರೆ ಈ ಛಲ ಅವರಲ್ಲಿ ಮತ್ತೆ ಗಟ್ಟಿಯಾಗಿದ್ದು, 7 ತಿಂಗಳ ಗರ್ಭಿಣಿಯಾಗಿದ್ದ ಸಂದರ್ಭ ಫೆ. 18ರಂದು ಶಿವರಾತ್ರಿ ದಿನ ಸ್ಯಾಕ್ಸೋಫೋನ್ ನುಡಿಸಲು ಆರಂಭಿಸಿ ಫೆ.19ರವರೆಗೂ ನುಡಿಸಿ ಗಿನ್ನಿಸ್ ರೆಕಾರ್ಡ್‍ನಲ್ಲಿ ತನ್ನ ಹೆಸರನ್ನು ಬರೆದುಕೊಂಡಿದ್ದಾರೆ.

ಸತತ 26.23 ಗಂಟೆಗಳ ಕಾಲ ಸ್ಯಾಕ್ಸೋಫೋನ್ ನುಡಿಸಲು ಇವರು  5 ವರ್ಷಗಳಿಂದ ಪ್ರಯತ್ನಪಟ್ಟಿದ್ದಾರೆ. 13ನೇ ವಯಸ್ಸಿನಲ್ಲಿ ಸ್ಯಾಕ್ಸೋಫೋನ್ ನುಡಿಸಲು ಆರಂಭಿಸಿದ ಇವರು ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು ಸೇರಿದಂತೆ 109ಕ್ಕೂ ಅಧಿಕ ಭಾಷೆಗಳಲ್ಲಿ ಸ್ಯಾಕ್ಸೊಫೋನ್ ನುಡಿಸಬಲ್ಲರು. ಈಗಾಗಲೇ ದೇಶದ ವಿವಿಧೆಡೆ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಸೈ ಎನಿಸಿಕೊಂಡಿದ್ದಾರೆ. ಇಷ್ಟು ಸಮಯ ನಿರಂತರವಾಗಿ ಸ್ಯಾಕ್ಸೊಪೋನ್ ನುಡಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

error: Content is protected !!