ದಯಾ ವಿಶೇಷ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ : ‘ವಿಶೇಷ ಮಕ್ಕಳ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಇಲ್ಲ’: ವ. ಫಾ. ವಿನೋದ್ ಮಸ್ಕರೇನಸ್‌ ವಿಷಾದ


ಬೆಳ್ತಂಗಡಿ:
ಕಪುಚಿನ್ ಕೃಷಿಕ್ ಸೇವಾ ಕೇಂದ್ರ (ರಿ) ಸಹಸಂಸ್ಥೆಯಾದ ದಯಾ ವಿಶೇಷ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಸಂಸ್ಥೆಯ ನಿರ್ದೇಶಕರಾದ ವ. ಫಾ. ವಿನೋದ್ ಮಸ್ಕರೇನಸ್ ಮಾತನಾಡಿ ಸರ್ವಪಳ್ಳಿ ರಾಧಾಕೃಷ್ಣನ್‌ರವರ ಆದರ್ಶದಂತೆ ಶಿಕ್ಷಕರಾದ ನಾವು ನಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಮಕ್ಕಳ ಬೆಳೆವಣಿಗೆಗಾಗಿ ಶ್ರಮಿಸಬೇಕು, ಮಕ್ಕಳನ್ನು ಉತ್ತಮ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಜವಾಬ್ದಾರಿ ಇದೆ. ವಿಶೇಷ ಮಕ್ಕಳನ್ನು ಆರೈಕೆ ಮಾಡುವುದು ಸುಲಭದ ಕೆಲಸವಲ್ಲ. ಸೇವಾ ಮನೋಭಾವನೆ ಇದ್ದರೆ ಮಾತ್ರ ಈ ಮಕ್ಕಳ ಆರೈಕೆ ಸಾಧ್ಯ. ವಿಶೇಷ ಮಕ್ಕಳಿಗೆ ಸಹಾಯ ಮಾಡಲು ನಾವು ಮುಂದೆ ಬರಬೇಕು ಎಂದು ಹೇಳಿದರು. ಪ್ರತಿವರ್ಷ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಕೊಡುತ್ತಾ ಬಂದಿದ್ದಾರೆ ಆದರೆ ವಿಶೇಷ ಶಿಕ್ಷಕರಿಗೆ ಯಾಕೆ ಉತ್ತಮ ಶಿಕ್ಷಕ ಎಂದು ಪ್ರಶಸ್ತಿಯನ್ನು ಕೊಡುತ್ತಿಲ್ಲ ಎಂದು ವಿಷಾದವನ್ನು ವ್ಯಕ್ತಪಡಿಸಿದರು. ಈ ಮಕ್ಕಳ ಹಾರೈಕೆಗೆ ಹೆಚ್ಚಿನ ಹಣದ ಅವಶ್ಯಕತೆ ಇದೆ ಎಂದು ಹೇಳಿದರು. ದಯಾ ವಿಶೇಷ ಶಾಲೆಯು ವಿಶೇಷ ಮಕ್ಕಳ ಆರೈಕೆಯನ್ನು ಮಾಡುತ್ತಾ ಬಂದಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಚರ್ಚ್ ವ. ಫಾ. ವಾಲ್ಟರ್ ಡಿಮೆಲ್ಲೊರವರು ಮಾತನಾಡಿ ವಿಶೇಷ ಮಕ್ಕಳ ನಡುವೆ ಸೇವೆ ಪವಿತ್ರವಾದ ದೇವರ ಸೇವೆ. ಭರವಸೆಯಿಂದ ನಾವು ಮುಂದೆ ಸಾಗಬೇಕಿದೆ. ದೇವರು ಎಲ್ಲಾ ಶಿಕ್ಷಕಿಯರನ್ನು ಮತ್ತು ಮಕ್ಕಳನ್ನು ಆಶೀರ್ವಾದಿಸಲಿ ಎಂದು ಶುಭಹಾರೈಸಿದರು.
ಎಲ್ಲಾ ಶಿಕ್ಷಕರಿಗೂ ಮತ್ತು ಶಿಕ್ಷೇಕೆತರರಿಗೂ ಮಕ್ಕಳು ಉಡುಗೊರೆಯನ್ನು ನೀಡಿ ಗೌರವಿಸಿದರು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬಂತು.
ವಿದ್ಯಾರ್ಥಿನಿ ರಶ್ಮಿ ನಿರೂಪಿಸಿ ವಂದಿಸಿದರು.

error: Content is protected !!