ಚಂದ್ರಯಾನ 3 ಸಕ್ಸಸ್, ಇಸ್ರೋ ತಂಡಕ್ಕೆ ಅಭಿನಂದನೆ: ಆ26ರಂದು ಪ್ರಧಾನಿ ಮೋದಿ ಬೆಂಗಳೂರಿಗೆ:

 

 

 

 

ಬೆಂಗಳೂರು: ವಿಶ್ವದ ಗಮನ ಸೆಳೆದಿದ್ದ ಚಂದ್ರಯಾನ-3 ನೌಕೆಯನ್ನು ಚಂದ್ರನ ಅಂಗಳದಲ್ಲಿ ಇಳಿಸಲು ಯಶಸ್ವಿಯಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಿಜ್ಞಾನಿಗಳು ಹಾಗೂ ಇಸ್ರೋ ತಂಡಕ್ಕೆ ಅಭಿನಂದನೆ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 26 ಶನಿವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದಲೇ ವರ್ಚುವಲ್ ಮೂಲಕ ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗನ್ನು ವೀಕ್ಷಿಸಿದರು. ನಂತರ ದೇಶವನ್ನುದ್ದೇಶಿಸಿ ಭಾಷಣ ಮಾಡಿ ಇಸ್ರೋ ತಂಡಕ್ಕೆ ಅಲ್ಲಿಂದಲೇ ಶುಭ ಕೋರಿದ್ದರು. ಇದೀಗ ವಿದೇಶದಿಂದ ವಾಪಸಾಗಲಿರುವ ಮೋದಿ ಈಗ ಖುದ್ದು ಭೇಟಿ ನೀಡಿ ಅಭಿನಂದನೆ ಸಲ್ಲಿಸಲಿದ್ದಾರೆ. ಅದಕ್ಕಾಗಿ ಆಗಸ್ಟ್ 26 ರಂದು ಸಂಜೆ 6 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದ್ದು, ಸಂಜೆ 7 ಗಂಟೆಗೆ ಇಸ್ರೋಗೆ ಭೇಟಿ ನೀಡಲಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ವಿಜ್ಞಾನಿಗಳ ಜೊತೆ ಇರಲಿದ್ದಾರೆ. ಚಂದ್ರಯಾನ ಸಫಲಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಿದ ಬಳಿಕ 9 ಗಂಟೆಗೆ ದೆಹಲಿಗೆ ವಾಪಸ್​ ಆಗಲಿದ್ದಾರೆ.

error: Content is protected !!