ಬೆಳ್ತಂಗಡಿ : ಬಂದಾರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ
ಸೆ: 12ರಂದು ನಡೆಯಲಿರುವ 14 ಮತ್ತು 17ರ ವಯೋಮಾನದ ಬಾಲಕ- ಬಾಲಕಿಯರ ದ.ಕ. ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ವಿಜ್ಞಾಪನಾ ಪತ್ರದ ಬಿಡುಗಡೆ ಕಾರ್ಯಕ್ರಮ ಹಾಗೂ ಪೂರ್ವ ಸಿದ್ಧತಾ ಸಭೆಯು ಆ:18ರ ಶುಕ್ರವಾರದಂದು
ಶಾಲಾ ಸಭಾಂಗಣದಲ್ಲಿ ನಡೆಯಿತು.
ಎಸ್ ಡಿ ಎಂ ಸಿ ಅಧ್ಯಕ್ಷ ಉಮೇಶ್ ಗೌಡ ಪೊಯ್ಯೊಳೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಂದಾರು ಗ್ರಾಮಪಂಚಾಯತ್ ನೂತನ ಅಧ್ಯಕ್ಷ ದಿನೇಶ್ ಗೌಡ ಕಂಡಿಗ ಮತ್ತಿತರ ಗಣ್ಯರು ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟದ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿದರು.
ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ
ಸತತ 13 ವಷಗಳಿಂದ ತಾಲೂಕು, ಜಿಲ್ಲೆ, ವಿಭಾಗ ರಾಜ್ಯ ಹಾಗೂ ರಾಷ್ಟ್ರಮಟ್ಟಗಳ ಸಾಧನೆಗೈದು
ಅನೇಕ ಕ್ರೀಡಾ ಸಾಧಕರನ್ನು ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ
ಈ ಶಾಲೆಯಲ್ಲಿ ಜಿಲ್ಲಾಮಟ್ಟದ
ವಾಲಿಬಾಲ್ ಪಂದ್ಯಾಟ ನಡೆಯಲಿರುವುದು ಹೆಮ್ಮೆಯ ಸಂಗತಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪೋಷಕರು, ವಿದ್ಯಾಭಿಮಾನಿಗಳು, ಗಣ್ಯರು ಸರ್ವ ರೀತಿಯಲಿ ಶ್ರಮಿಸಬೇಕು ಎಂದರು.
ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಸುಮಾರು
5 ಲಕ್ಚಕ್ಕೂ ಅಧಿಕ ಖರ್ಚು ವೆಚ್ಚವಿದ್ದು ಪಂದ್ಯಾಟದ ಯಶಸ್ವಿಗಾಗಿ ಮಾಡಿಕೊಂಡಿರುವ ಕಾರ್ಯಕಾರಿ ಸಮಿತಿ ,
ಎಸ್ ಡಿಎಂಸಿ ಹಾಗೂ ಬೈಲುವಾರು ಸಮಿತಿಗಳ ಮೂಲಕ
ಊರವರು, ದಾನಿಗಳು, ಸಂಘ ಸಂಸ್ಥೆಗಳು, ಪೋಷಕರಿಂದ ಹಣ ಸಂಗ್ರಹಿಸಬೇಕಾಗಿದ್ದು
ತನು, ಮನ, ಧನಗಳ ಸಹಕಾರ ನೀಡಬೇಕು ಎಂದು ಕೋರಿದರು.
ಮಾಜಿ ಗ್ರಾಮಪಂಚಾಯತ್ ಅಧ್ಯಕ್ಷ ಅಬ್ಬಾಸ್ ಬಟ್ಲಡ್ಕ ವಾಲಿಬಾಲ್ ಪಂದ್ಯಾಟದ ಪೂರ್ವ ಸಿದ್ಧತೆ, ಖರ್ಚು
ವೆಚ್ಚ ವಿವರಗಳನ್ನು ಹಾಗೂ
ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡವರ ವಿವರಗಳನ್ನು
ತಿಳಿಸಿದರು.
ಕೂಪನ್ ವಿವರ ನೀಡಿ ಧನಸಹಾಯಕ್ಕಾಗಿ
ವಿನಂತಿಸಿಕೊಂಡಂತೆ ಸಭೆಯಲ್ಲಿ ಭಾಗವಹಿಸಿದ ಪೋಷಕರು, ಗ್ರಾಪಂ ಸದಸ್ಯರು, ದಾನಿಗಳು, ಸ್ವಯಂಪ್ರೇರಿತವಾಗಿ ಪಂದ್ಯಾಟದ ಖರ್ಚಿನ ಬಗ್ಗೆ
ತಮ್ಮ ಧನ ಸಹಾಯ ಘೋಷಿಸಿದರು, ಕೆಲವರು ನಗದು ನೀಡಿ ರಶೀದಿ,ಕೂಪನ್ ಪಡೆದರು.
ಕಾರ್ಯಕಾರಿ ಸಮಿತಿ ಅಧ್ಯಕ್ಷ ಉದಯ ಭಟ್, ಮುಖ್ಯೋಪಾಧ್ಯಾಯ ಮಂಜ ನಾಯ್ಕ್ ಸಿ,
ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪಾವತಿ ಬರೆಮೇಲು,
ತಾ.ಪಂ. ಮಾಜಿ ಸದಸ್ಯ ಕೃಷ್ಣಯ್ಯ ಆಚಾರಿ,
ಮಾಜಿ ಗ್ರಾಪಂ ಅಧ್ಯಕ್ಷೆ ಪರಮೇಶ್ವರಿ ಕೆ ಗೌಡ ಮತ್ತಿತರರು ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್ ಸ್ವಾಗಸಿದರು.
ಪೋಷಕರು,
ಹಳೆ ವಿದ್ಯಾರ್ಥಿಗಳು,
ಗ್ರಾಪಂ ಸದಸ್ಯರು, ಭಾಗವಹಿಸಿದರು.