ಬೆಳ್ತಂಗಡಿ : ಹಾಡುಹಗಲೇ ಹಣ, ಚಿನ್ನಾಭರಣ ದೋಚಿದ ಕಳ್ಳರು..!

ಬೆಳ್ತಂಗಡಿ : ಹಾಡುಹಗಲೇ ಮನೆಗೆ ನುಗ್ಗಿ ಚಿನ್ನಾಭರಣ, ಹಣ ದೋಚಿದ ಘಟನೆ ಉಜಿರೆ ಗ್ರಾಮದಲ್ಲಿ ನಡೆದಿದೆ.

ಕಲ್ಲೆ ನಿವಾಸಿ ಫೇಲಿಕ್ಸ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯ ಹಿಂಭಾಗದ ಮೂಲಕ ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ 15 ಪವನ್ ಚಿನ್ನ ಹಾಗೂ 20,000 ರೂ.ಹಣವನ್ನು ದೋಚಿದ್ದಾರೆ. ಮಧ್ಯಾಹ್ನ ಫೇಲಿಕ್ಸ್ ಮಗಳು ಕಾಲೇಜ್ ಮುಗಿಸಿ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ಇನ್ಸ್ ಪೆಕ್ಟರ್ ನಾಗೇಶ್ ಕದ್ರಿ, ಸಬ್ ಇನ್ಸ್ ಪೆಕ್ಟರ್ ಧನ್‌ರಾಜ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಹೆಚ್ಚಿನ ಪರಿಶೀಲನೆಗೆ ಮಂಗಳೂರಿನಿಂದ ಶ್ವಾನದಳ ಮತ್ತು ಎಫ್‌ಎಸ್‌ಎಲ್ ತಂಡ ಆಗಮಿಸಲಿದೆ.

error: Content is protected !!