ಬೆಳ್ತಂಗಡಿ : ಸಮಾಜದಲ್ಲಿ ಸಂಘಟನೆಗಳಿಗೆ ಬಹಳ ಮಹತ್ವವಿದೆ. ಎಂದು ಮಂಜುಳಾ ಅಭಯಚಂದ್ರ ಜೈನ್ ಹೇಳಿದರು. ಅವರು ಬೆಳ್ತಂಗಡಿ ಮಂಜುನಾಥ ಸ್ವಾಮಿ ಕಲಾಭವನದ “ಪಿನಾಕಿ” ಸಭಾಂಗಣದಲ್ಲಿ ನಡೆದ ಬೆಳ್ತಂಗಡಿ ವ್ಯಾಪ್ತಿಯ ಶ್ರಾವಿಕೆಯರ ಸಹಭಾಗಿತ್ವದಲ್ಲಿ ರಚನೆಯಾದ ನೂತನ ಮಹಿಳಾ ಸಮಾಜದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಸಂಘಟನೆಗಳ ಮೂಲಕ ನಡೆಯುವುದಲ್ಲದೆ ಉತ್ತಮ ನಾಯಕತ್ವ ಗುಣ ಬೆಳೆಯಲು ಕೂಡ ಸಂಘಟನೆಗಳಿಂದ ಸಾಧ್ಯ, ಬೆಳ್ತಂಗಡಿಯಲ್ಲಿ ನೂತನವಾಗಿ ಉದ್ಘಾಟನೆಗೊಂಡ ಮಹಿಳಾ ಸಮಾಜವು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಾದರಿಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರಜತಾ.ಪಿ. ಶೆಟ್ಟಿ ಜೈನ ಧರ್ಮದ ಆಚಾರ ವಿಚಾರಗಳು ವಿಶೇಷವಾದದ್ದು ನಾವು ಬದುಕುವುದಲ್ಲದೇ ಇನ್ನೊಬ್ಬರನ್ನು ಬದುಕಲು ಬಿಡು ಸಕಲ ಜೀವಿಗಳನ್ನೂ ಪ್ರೀತಿಸು, ಅಹಿಂಸೋ ಪರಮೋ ಧರ್ಮ ಪರಿಪಾಲನೆ ಎಂಬುವುದೇ ಜೈನ ಧರ್ಮದ ಮೂಲತತ್ವವಾಗಿದೆ. ಈ ಕಾರಣಗಳಿಂದಾಗಿಯೇ ಜೈನಧರ್ಮ ವಿಶ್ವ ಧರ್ಮವಾಗಿದೆ. ಬೆಳ್ತಂಗಡಿ ಶಾಂತಿಶ್ರೀ ಮಹಿಳಾ ಸಮಾಜ ಉತ್ತಮ ನಾಯಕತ್ವದಲ್ಲಿ ಉದ್ಘಾಟನೆಗೊಂಡಿದೆ ಎಂದರು.
ಶಿರೋನಾಮೆಯನ್ನು ಶ್ರೀಮತಿ ರಜತಾ ಪಿ. ಶೆಟ್ಟಿ ಲಾಂಛನ ಶಾಂತಿಶ್ರೀ ಯನ್ನು ಮಂಜುಳಾ ಅಭಯಚಂದ್ರ ಜೈನ್ ಅನಾವರಣಗೊಳಿಸಿದರು.
ಧರಣೇಂದ್ರ ಕೆ. ಜೈನ್ ಹಾಗೂ ಸುದರ್ಶನ್ ಹೆಗ್ಡೆ ಕಣಿಯೂರು ಗುತ್ತು ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಕಾರ್ಯದರ್ಶಿ ರಾಜಶ್ರೀ ಎಸ್. ಹೆಗ್ಡೆ ಪ್ರಸ್ತಾವನೆಗೈದರು.
ಕೋಶಾಧಿಕಾರಿ ಶ್ರೀಮತಿ ಅನುಪ ಕುಮಾರಿ ಸ್ವಾಗತಿಸಿ. ಧವಳಾ ಜೈನ್ ಉಜಿರೆ ನಿರ್ವಹಿಸಿದರು, ಉಷಾ ಜೈನ್ ಗುರುವಾಯನಕೆರೆ ಧನ್ಯವಾದವಿತ್ತರು.