ಸೌಜನ್ಯಾಳ ನ್ಯಾಯದ ಪರ ಧ್ವನಿ ಎತ್ತಿದ ‘ಭೀಮಾ’: ‘ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು’: ದುನಿಯಾ ವಿಜಯ್ ಟ್ವಿಟ್

ಬೆಂಗಳೂರು: ವಿದ್ಯಾರ್ಥಿನಿ ಸೌಜನ್ಯಾಳ ಅತ್ಯಾಚಾರ ಹಾಗೂ ಕೊಲೆ ನಡೆದು 11 ವರ್ಷವಾಗುತ್ತಿದ್ದರೂ ಇನ್ನೂ ನೈಜ ಆರೋಪಿಯ ಪತ್ತೆಯಾಗಿಲ್ಲ. ಸಂತೋಷ್ ರಾವ್ ನಿರಪರಾಧಿ ಎಂದು ಸಾಭೀತಾದ ಬೆನ್ನಲ್ಲೆ ರಾಜ್ಯವೇ ಸೌಜನ್ಯಾಳನ್ನು ಕೊಂದವರು ಯಾರು ಎಂದು ಪ್ರಶ್ನೆ ಕೇಳುತ್ತಿದೆ. ಹಲವಾರು ಸಂಘಟನೆಗಳು ನ್ಯಾಯಕ್ಕಾಗಿ ಸೌಜನ್ಯ ಕುಟುಂಬದ ಜೊತೆ ನಿಂತಿದೆ. ಈ ಮಧ್ಯೆ ಸ್ಯಾಂಡಲ್‌ವುಡ್ ‘ಭೀಮಾ’ ಕುಟುಂಬಸ್ಥರಿಗೆ ನ್ಯಾಯ ಸಿಗಬೇಕೆಂದು ಧ್ವನಿ ಎತ್ತಿದ್ದು, ಅದಕ್ಕಾಗಿ ಪ್ರತಿವರ್ಷದ ವಾಡಿಕೆಯಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾರೆ..? ಈ ಕುರಿತು ಟ್ವಿಟ್ ಮಾಡಿದ್ದಾರೆ.

‘ಪ್ರತೀ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ.’

ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು – ಬುದ್ಧ’ ಎಂದು ಟ್ವಿಟ್ ಮಾಡಿದ್ದಾರೆ.

error: Content is protected !!