ಬೆಳ್ತಂಗಡಿ : ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಗೌಡರ ಯಾನೆ ಒಕ್ಕಲಿಗ ಸೇವಾ ಸಂಘ (ರಿ) ಬೆಳ್ತಂಗಡಿ ಜುಲೈ 31 ರಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಮನವಿ ನೀಡಿದ್ದಾರೆ.
ಬೆಂಗಳೂರಿಗೆ ತೆರಳಿದ ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ಉಜಿರೆ ಕಾಲೇಜ್ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ಸಿಬಿಐ ವಿಶೇಷ ನ್ಯಾಯಾಲಯ ಶಂಕಿತ ಆರೋಪಿ ಸಂತೋಷ್ ರಾವ್‌ನನ್ನು ದೋಷಮುಕ್ತ ಮಾಡಿದ್ದು, ಇದರಿಂದ ನೈಜ ಆರೋಪಿ ಪತ್ತೆಯಾಗದೆ ಸೌಜನ್ಯ ಕುಟುಂಬಕ್ಕೆ ನ್ಯಾಯ ಇನ್ನೂ ಸಿಕ್ಕಿಲ್ಲ. ಹೀಗಾಗಿ ಮತ್ತೆ ಉನ್ನತ್ತ ಮಟ್ಟದ ಮರುತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮನವಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗೆ ಸೇವಾ ಸಂಘದ ಗೌರವಾಧ್ಯಕ್ಷ ಹೆಚ್.ಪದ್ಮಗೌಡ, ಅಧ್ಯಕ್ಷ ಪಿ.ಕುಶಾಲಪ್ಪ ಗೌಡ ಪೂವಾಜೆ, ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ, ಕೃಷ್ಣಪ್ಪ ಗೌಡ ಸವಾಣಾಲು, ಕಾರ್ಯದರ್ಶಿ ಶ್ರೀನಾಥ್ ಕೆಎನ್.ನಡ , ಗಣೇಶ್ ಗೌಡ ಕಡಿರುದ್ಯಾವರ, ನಿರ್ದೇಶಕರಾದ ಧರ್ಣಪ್ಪ ಗೌಡ ಬಾನಡ್ಕ, ವಿಜಯ ಗೌಡ ನ್ಯಾಯತರ್ಪು, ಯುವರಾಜ್ ಅನಾರು, ಹರೀಶ್ ಗೌಡ ಪರಪ್ಪಾಜೆ , ರವೀಂದ್ರನಾಥ ಗೌಡ ಕೊಯ್ಯೂರು, ಸದಸ್ಯರಾದ ಮಾಧವ ಗೌಡ, ನಿತಿನ್ ಕಲ್ಮಂಜ , ತೀಕ್ಷಿತ್ ಮಲವಂತಿಗೆ ಜೊತೆಯಲ್ಲಿದ್ದರು.