ಉಜಿರೆ: ಸ್ಪಂದನಾ ಸೇವಾ ಸಂಘದ 116ನೇ ಸೇವಾ ಯೋಜನೆಯ ಧನಸಹಾಯವನ್ನು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೀಡಲಾಗಿದೆ.
ಉಜಿರೆ ಶಾರದ ಮಂಟಪದಲ್ಲಿ ನಡೆದ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ(ರಿ.) ಉಜಿರೆ ಗ್ರಾಮ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮದ ಕಿರಿಯಾಡಿ, ಕೊಡಂಗೆ ನಿವಾಸಿ ದಿ. ನವೀನ ಗೌಡ ಇವರ ಮಕ್ಕಳ ವಿದ್ಯಾಭ್ಯಾಸಕ್ಕೆ ರೂ. 20,000/- ದ ಚೆಕ್ಕನ್ನು ಸುಳ್ಯದ ಉಪನ್ಯಾಸಕಿ ಡಾ. ಅನುರಾಧ ಕುರುಂಜಿ ಇವರ ಮೂಲಕ ಶ್ರೀಮತಿ ಕವಿತಾ ರವರಿಗೆ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಉಪಾಧ್ಯಕ್ಷ ಕೃಷ್ಣಪ್ಪ ಗೌಡ ದೇವಸ, ಸವಣಾಲು, ನಿಕಟ ಪೂರ್ವ ಕಾರ್ಯದರ್ಶಿ ಮೋಹನ ಗೌಡ ಕೊಯ್ಯೂರು, ವಾಣಿ ಸೌಹಾರ್ದ ಕೋ-ಅಪರೇಟೀವ್ ಸೊಸೈಟಿ (ಲಿ.) ನಿರ್ದೇಶಕರಾದ ಗೋಪಾಲಕೃಷ್ಣ ಗುಲ್ಲೋಡಿ, ಮಾಧವ ಗೌಡ ಬೆಳ್ತಂಗಡಿ, ಗೋಪಾಲ ಕೃಷ್ಣ (ಜಿ.ಕೆ) ಉಜಿರೆ, ಸುರೇಶ್ ಕೌಡಂಗೆ, ವಾಣಿ ಸೌಹಾರ್ದ ಕೋ-ಅಪರೇಟೀವ್ ಸೊಸೈಟಿ (ಲಿ.)ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧನಂಜಯ್ ಕುಮಾರ್, ಸೋಮಂತ್ತಡ್ಕ ಶಾಖೆಯ ವ್ಯವಸ್ಥಾಪಕರು ಉಮೇಶ್ ಮೈರ್ನೋಡಿ, ಉಜಿರೆ ಗ್ರಾಮ ಸಮಿತಿ ಅಧ್ಯಕ್ಷ ಧರ್ಣಪ್ಪ ಗೌಡ ಧರಣಿ, ಉಜಿರೆ, ಕಾರ್ಯದರ್ಶಿ ಶೇಖರ ಗೌಡ ಕುಂಭಪಾಲು, ಕೋಶಾಧಿಕಾರಿ ಬಾಲಕೃಷ್ಣ ಗೌಡ ಕೊರಮೇರು, ಗೌರವಾಧ್ಯಕ್ಷ ಪ್ರಕಾಶ ಗೌಡ ಅಪ್ರಮೇಯ, ಯುವ ವೇದಿಕೆ ಅಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿ ಭರತ್, ಗ್ರಾಮ ಸಮಿತಿ ಸದಸ್ಯರು ಹಾಗೂ ಸ್ಪಂದನಾ ಸೇವಾ ಸದಸ್ಯರು ಉಪಸ್ಥಿತರಿದ್ದರು.