ಚಾತುರ್ಮಾಸದಲ್ಲಿ ಜೀವನ ಪರಿವರ್ತನೆ: ಪಡಂಗಡಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ: ಪೂಜ್ಯ ಮುನಿಶ್ರೀ 108 ದಿವ್ಯಸಾಗರ ಮಹಾರಾಜ್ ಅವರ ಭವ್ಯ ಮಂಗಲ ಚಾತುರ್ಮಾಸ ವರ್ಷಾಯೋಗ:

 

 

ಬೆಳ್ತಂಗಡಿ: ಜೈನ ಸಮಾಜ ಆತಂಕದಲ್ಲಿದೆ, ಜೈನ ಮುನಿ ಹತ್ಯೆ ಖಂಡಿಸಿ ದೇಶವೇ ಕಂಬನಿ ಮಿಡಿದಿದೆ. ಜೈನ ಧರ್ಮಕ್ಕೆ ಸಂಕಟವಾಗಿದೆ. ಎಂದು ಪರಮಪೂಜ್ಯ ಧ್ಯಾನ ದಿವಾಕರ ಮುನಿಶ್ರೀ 108 ಜೈಕೀರ್ತಿ ಮಹಾರಾಜರ ಪರಮ ಶಿಷ್ಯ
ಪರಮ ಪೂಜ್ಯ ಮುನಿಶ್ರೀ 108 ದಿವ್ಯ ಸಾಗರ ಮಹಾರಾಜರು ನುಡಿದರು. ಅವರು ಪಡಂಗಡಿ ಭಗವಾನ್ ಶ್ರೀ ಪಾರ್ಶ್ವ ನಾಥ ಸ್ವಾಮಿ ಬಸದಿಯಲ್ಲಿ ಜು09 ರಿಂದ ನ12 ರವರೆಗೆ
ಭವ್ಯ ಮಂಗಲ ಚಾತುರ್ಮಾಸ ವರ್ಷಾಯೋಗ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಚಾತುರ್ಮಾಸದಲ್ಲಿ ನಮಗೆ ಜೀವನದಲ್ಲಿ ಪರಿವರ್ತನೆಯಾಗುತ್ತದೆ. ಪಡಂಗಡಿಯಲ್ಲಿ ಧರ್ಮ ನೆಲೆಯಾಗಿದೆ. ಇಲ್ಲಿ ಶಾಂತಿ ನೆಮ್ಮದಿ ನೆಲೆ ನಿಂತಿದೆ ಇಲ್ಲಿನ ಜನರಿಗೆ ಭಕ್ತಿ ಹೆಚ್ಚಾಗಿದೆ ಅದ್ದರಿಂದ ಧರ್ಮ ಸಂಚಯನ ಹೆಚ್ಚಿದೆ, ಆಕರ್ಷಣೆ ಇದೆ. ಎಂದು ಹೇಳಿದರು.

 

 

 

ಈ ವೇಳೆ ರತನ್ ಕುಮಾರ್ ಪಡಂಗಡಿ ಬೀಡು, ಅಮರ್ ನಾಥ್ ಹೆಗ್ಗಡೆ ಮಲ್ಲಿಪಾಡಿ, ಪ್ರವೀಣ್ ಕುಮಾರ್ ಕಿನ್ಯಾಲ್ ಬೆಟ್ಟು, ವಿನಯಪ್ರಸಾದ್, ನರೇಂದ್ರ ಕುಮಾರ್, ಲಾಲ್ ಚಂದ್ರ ಭಂಗ, ದೇವರಾಜ್ ಜೈನ್, ಉದಯಕುಮಾರ್ ಮಲ್ಲಿಪ್ಪಾಡಿ, ಉದಯ ಕುಮಾರ್, ಪ್ರವೀಣ್ ಕುಮಾರ್ ನಡುಬೆಟ್ಟು, ಧರಣೇಂದ್ರ ಕೆ. ಜೈನ್, ಶ್ರೀಪತಿ ಇಂದ್ರ , ಅಜಿತ್ ಕುಮಾರ್ ಪುತ್ಯೆ, ನಮನ್ ರಾಜ್, ಪ್ರವರ್ತನ್, ಮಲ್ಲಿನಾಥ್ ಇಂದ್ರ ಹಾಗೂ ಈ‌ ಸಂದರ್ಭದಲ್ಲಿ ಬಸದಿಯ ಪ್ರಮುಖರು ಜೈನ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.

error: Content is protected !!