ಪತ್ರಕರ್ತನ ಮೇಲೆ ದೌರ್ಜನ್ಯ:ಬೆಳ್ತಂಗಡಿ ಪತ್ರಕರ್ತರ ಸಂಘದಿಂದ ಖಂಡನೆ:ನ್ಯಾಯ, ಹಾಗೂ ರಕ್ಷಣೆಗಾಗಿ ರಾಜ್ಯಪಾಲರಿಗೆ ಮನವಿ:

 

 

ಬೆಳ್ತಂಗಡಿ: ಪತ್ರಕರ್ತ ನಿಶಾಂತ್ ಬಿಲ್ಲಂಪದವು ಮೇಲೆ ಜು.15 ರಂದು ಪುತ್ತೂರಿನ ಬಪ್ಪಳಿಗೆಯಲ್ಲಿ ನಡೆದ ದೌರ್ಜನ್ಯವನ್ನು ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಖಂಡಿಸಿದೆ.

ವರದಿಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಪತ್ರಕರ್ತ ನಿಶಾಂತ್ ಬಿಲ್ಲಂಪದವು ಮೇಲೆ ದೌರ್ಜನ್ಯ ನಡೆದಿದ್ದು ಈ ಘಟನೆ ಪತ್ರಿಕಾ ಸ್ವಾತಂತ್ರ‍್ಯಕ್ಕೆ ಧಕ್ಕೆ ತಂದಿದೆ. ಸಮಗ್ರ ತನಿಖೆಗೆ ಆಗ್ರಹಿಸಿ ಹಾಗೂ ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿ ಬೆಳ್ತಂಗಡಿ ಪತ್ರಕರ್ತರ ಸಂಘದ ವತಿಯಿಂದ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಹಾಗೂ ಪೊಲೀಸ್ ಇಲಾಖೆಗೆ ಮನವಿ ನೀಡಲಾಯಿತು.ಈ ಸಂದರ್ಭದಲ್ಲಿ
ಸಂಘದ ಅಧ್ಯಕ್ಷ ಹೃಷಿಕೇಶ್ ಧರ್ಮಸ್ಥಳ, ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಎಣಿಂಜೆ, ಕೋಶಾಧಿಕಾರಿ ತುಕರಾಮ್ ಬಿ,ಸದಸ್ಯರುಗಳಾದ ದೇವಿಪ್ರಸಾದ್, ಬಿ.ಎಸ್. ಕುಲಾಲ್, ಜಾರಪ್ಪ ಪೂಜಾರಿ, ಶಿಬಿ ಧರ್ಮಸ್ಥಳ, ಅಚುಶ್ರೀ ಬಾಂಗೇರು, ಶ್ರೀನಿವಾಸ ತಂತ್ರಿ, ಉಪಸ್ಥಿತರಿದ್ದರು.

error: Content is protected !!