ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಗೆ ದಿಡೀರ್ ಭೇಟಿ ನೀಡಿ ಪರಿಶೀಲಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್: ಹಾಳಾದ ವೈದ್ಯಕೀಯ ಉಪಕರಣಗಳನ್ನು 2 ದಿನದೊಳಗೆ ಸರಿಪಡಿಸುವಂತೆ ಡಿಎಚ್ಒ ಗೆ ಸೂಚನೆ ಎಂ.ಬಿ.ಬಿ.ಎಸ್ ವೈದ್ಯರನ್ನು ಸರ್ಕಾರಿ ಆಸ್ಪತ್ರೆಗೆ ನಿಯೋಜಿಸುವ ಬಗ್ಗೆ ಪ್ರಸ್ತಾಪ

 

 

 

ಬೆಳ್ತಂಗಡಿ:ತಾಲೂಕು ಸರಕಾರಿ ಆಸ್ಪತ್ರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದ.ಕ.ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಇಂದು (ಜು08) ಭೇಟಿ ನೀಡಿದರು.

ವಾರ್ಡ್, ತೀವ್ರನಿಗಾಘಟಕ, ಡಯಾಲಿಸಿಸ್, ಸ್ಕ್ಯಾನಿಂಗ್ ಕೇಂದ್ರ, ವಾರ್ಡ್ ಶೌಚಾಲಯವನ್ನೂ ವೀಕ್ಷಿಸಿ, ರೋಗಿಗಳ ಜೊತೆ ಮಾತನಾಡಿದ ಸಚಿವರು ಬಳಿಕ ಆಸ್ಪತ್ರೆಯ ಕುಂದುಕೊರತೆಗಳ ಬಗ್ಗೆ ವೈದ್ಯರ ಜೊತೆ , ಡಿ ಹೆಚ್ ಒ, ಜೊತೆ ಚರ್ಚೆ ನಡೆಸಿದರು.

ಆಸ್ಪತ್ರೆಯ ಕುರಿತು ಮಾಧ್ಯಮದವರೊಂದಿಗೆ  ಅಭಿಪ್ರಾಯ ವ್ಯಕ್ತಪಡಿಸಿದ ಸಚಿವರು ಹಾಳಾದ ಉಪಕರಣಗಳು ರಿಪೇರಿಯಾಗಿಲ್ಲ, ಸ್ಕ್ಯಾನಿಂಗ್ ಉಪಕರಣ ಹಾಳಾಗಿರುವುದರಿಂದ ಹೊಸ ಮೆಷಿನ್ ಖರೀದಿಸಲು ತಿಳಿಸಿದ್ದೇವೆ. ಡಯಾಲಿಸಿಸ್ ಕೇಂದ್ರಕ್ಕೂ ಹೊಸ ಉಪಕರಣ ತರಲಾಗುತ್ತದೆ, ಬಿಪಿಎಲ್ ಕಾರ್ಡ್ ದಾರರು ಆಸ್ಪತ್ರೆಗೆ ಬಂದಾಗ ಉಚಿತ ಜೌಷಧ ನೀಡಬೇಕು, ಹೆರಿಗೆಗೆ ಬರುವವರ ಸಂಖ್ಯೆ ಕಡಿಮೆ ಇದೆ. ಉತ್ತಮ ರೀತಿಯಾಗಿ ಆಸ್ಪತ್ರೆ ನಡೆಯಬೇಕು. ಹಾಳಾದ ವೈದ್ಯಕೀಯ ಉಪಕರಣಗಳನ್ನು 2 ದಿನದೊಳಗೆ ಸರಿಪಡಿಸಬೇಕು ಎಂದು ಡಿಹೆಚ್‌ಓ ಗೆ ಸೂಚನೆ ನೀಡಿದರು. ಇದೇ ವೇಳೆ ಎಂಬಿಬಿಎಸ್ ವೈದ್ಯರನ್ನು ಸರ್ಕಾರಿ ಆಸ್ಪತ್ರೆಗೆ ನಿಯೋಜಿಸುವ ನಿರ್ಧಾರದ ಬಗ್ಗೆ ಪ್ರಸ್ತಾಪಿಸಿದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ಮಾಜಿ ಶಾಸಕ ವಸಂತ ಬಂಗೇರ, ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬ್ಲಾಕ್ ಅಧ್ಯಕ್ಷರುಗಳಾದ ರಂಜನ್ .ಜಿ. ಗೌಡ, ಶೈಲೇಶ ಕುಮಾರ್ ಕುರ್ತೋಡಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

error: Content is protected !!