ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿರಂತರ ಭಾರೀ ಮಳೆಯಾಗುತ್ತಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜು. 03ರಿಂದ ಆರಂಭವಾದ ಮಳೆ ಜು.07ರವರೆಗೂ ಬಿಡುವಿಲ್ಲದೇ ಸುರಿಯುತ್ತಿದ್ದು ಬೆಳ್ತಂಗಡಿ ತಾಲೂಕಿನಲ್ಲಿ ಸರಾಸರಿ 112.3ಮಿ.ಮೀ ಮಳೆಯಾಗಿದೆ.
ಬೆಳ್ತಂಗಡಿಯಲ್ಲಿ 78.6 ಮಿ.ಮೀ, ಧರ್ಮಸ್ಥಳ 98.6ಮಿ.ಮೀ, ಕೊಕ್ಕಡ 116.4ಮಿ.ಮೀ, ನಾರಾವಿ 82.4ಮಿ.ಮೀ, ವೇಣೂರು 184.6ಮಿ.ಮೀ, ಸುಲ್ಕೇರಿ 94.8ಮಿ.ಮೀ, ಕುಕ್ಕಳ 131.0 ಮಿ.ಮೀ ಮಳೆಯಾಗಿದೆ. ನೇತ್ರಾವತಿ, ಮೃತ್ಯುಂಜಯ ನದಿಗಳ ಹರಿವಿನ ಮಟ್ಟ ಏರಿಕೆಯಾಗುವ ಸಾಧ್ಯತೆಯಿದ್ದು ಒಂದಿಷ್ಟು ಮುನ್ನೆಚ್ಚರಿಕೆ ಅಗತ್ಯವಾಗಿದೆ. ದಿಡುಪೆ ಸಮೀಪದ ನೇತ್ರಾವತಿ ನದಿಯ ಕೊಪ್ಪದ ಗಂಡಿ ಸೇತುವೆ ನಿನ್ನೆ ಮುಳುಗಡೆಗೊಂಡಿತ್ತು.
ಸತತ ಮಳೆ ಪರಿಣಾಮವಾಗಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಓರ್ವ ವ್ಯಕ್ತಿ ನೀರುಪಾಲಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.