ಬೆಳ್ತಂಗಡಿ: ತಾಲೂಕಿನ ನಡ ಗ್ರಾಮದ ಇತಿಹಾಸ ಪ್ರಸಿದ್ಧ ಗಡಾಯಿಕಲ್ಲು ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತ ಇದೆ.ಈಗಾಗಲೇ ಮಳೆ ಪ್ರಾರಂಭವಾಗಿರುವುದರಿಂದ ಮುಂದಿನ ದಿನಗಳಲ್ಲಿ ಗಡಾಯಿಕಲ್ಲು ಚಾರಣಕ್ಕೆ ಅವಕಾಶ ನಿರ್ಬಂಧಿಸಲಾಗುತ್ತದೆ. ಅದರೂ ಇವತ್ತು ರಜಾದಿನವಾದ ಬಾನುವಾರ ಪ್ರಕೃತಿಯ ಸೊಬಗನ್ನು ವೀಕ್ಷಿಸಲು ಸಾವಿರಾರು ಪ್ರವಾಸಿಗರು ಆಗಮಿಸಿದ್ದರಿಂದ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.ಬೆಳಗ್ಗಿನಿಂದಲೇ ಜಿಲ್ಲೆಯಲ್ಲದೇ ಇತರೇ ಕಡೆಗಳಿಂದ ವಿವಿಧ ಬೈಕ್ ಹಾಗೂ ವಾಹನಗಳು ಆಗಮಿಸಿದ್ದರಿಂದ ಟ್ರಾಫಿಕ್ ಜಾಮ್ ಸೇರಿದಂತೆ ಪಾರ್ಕಿಂಗ್ ಗೆ ಕೂಡ ಸಮಸ್ಯೆ ಉಂಟಾಯಿತು.
ಈ ವೇಳೆ ಸ್ವಲ್ಪ ಜನರನ್ನು ಮಾತ್ರ ಗಡಾಯಿಕಲ್ಲಿಗೆ ಏರಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟು ಗೇಟ್ ಹಾಕಿದ್ದರು. ಅದಲ್ಲದೇ ಸ್ಥಳೀಯರು ಅಧಿಕಾರಿಗಳೊಂದಿಗೆ ಸ್ಪಂದಿಸಿ ಯಾವುದೇ ಗೊಂದಲ ನಿರ್ಮಾಣವಾಗದ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭ ಅಲ್ಲಿಗೆ ಬಂದ ಅರಣ್ಯ ಸಿಬ್ಬಂದಿಯೋರ್ವರು ಸ್ಥಳೀಯರೊಬ್ಬರನ್ನು ಹೊರನಡೆಯಿರಿ ಎಂದು ಗದರಿಸಿದಾಗ ಸ್ಥಳೀಯರೆಲ್ಲರೂ ಸೇರಿ ಅರಣ್ಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡದ್ದಲ್ಲದೇ ಇಲ್ಲಿ ಏನಾದರೂ ಅನಾಹುತ ಅದರೂ ತಕ್ಷಣ ಸ್ಪಂದಿಸುವವರು ಸ್ಥಳೀಯರಾದ ನಾವು ನೀವು ಎಲ್ಲ ಆದ ನಂತರ ಬರುವುದು ಅದರೆ ನೀವು ನಮ್ಮನ್ನೇ ಗದರಿಸಿ ದಬಾಯಿಸುವುದು ಸರಿಯಲ್ಲ ನಿಮ್ಮ ಮೇಲಾಧಿಕಾರಿಯನ್ನು ಕರೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.ಅದಲ್ಲದೇ ಏನಾದರೂ ಸಮಸ್ಯೆಗಳಾದಲ್ಲಿ ಅಂಬುಲೆನ್ಸ್, ಸ್ಟ್ರಚ್ಚರ್ ಸೇರಿದಂತೆ ಮೂಲಭೂತ ಸೌಕರ್ಯ ಹಾಗೂ ಬರುವ ಪ್ರವಾಸಿಗರಿಗೆ ವಾಹನ ಪಾರ್ಕಿಂಗ್ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುವ ಬಗ್ಗೆಯೂ ಸ್ಥಳೀಯರು ಒತ್ತಾಯಿಸಿದ್ದಾರೆ.ಈಗಾಗಲೇ ಮಳೆ ಪ್ರಾರಂಭವಾಗಿದ್ದು ಇನ್ನು ಗಡಾಯಿಕಲ್ಲು ಹತ್ತುವುದು ಅಪಾಯಕಾರಿಯಾಗಿದೆ. ಕಡಮಗುಂಡಿ, ಕಾಜೂರು, ದಿಡುಪೆ, ಸೇರಿದಂತೆ ತಾಲೂಕಿನ ವಿವಿಧ ಪ್ರವಾಸಿ ತಾಣಗಳಲ್ಲಿ ಸಾವಿರಾರು ಪ್ರವಾಸಿಗರು ಇವತ್ತು ವೀಕ್ಷಣೆಗಾಗಿ ಆಗಮಿಸಿರುವ ಬಗ್ಗೆ ಮಾಹಿತಿಯನ್ನು ಸ್ಥಳೀಯರು ಪ್ರಜಾಪ್ರಕಾಶ ನ್ಯೂಸ್ ಗೆ ನೀಡಿದ್ದಾರೆ.