ಬೆಳ್ತಂಗಡಿ ಕಾಂಗ್ರೆಸ್ ಅಭಿನಂದನಾ ಸಭೆ:ಅಸಮಾಧಾನ ಹೊರ ಹಾಕಿದ ಕೈ ಕಾರ್ಯಕರ್ತರು: ಪತ್ರಕರ್ತರನ್ನು ಟಾರ್ಗೆಟ್ ಮಾಡಿದ ಮಾಜಿ ಶಾಸಕ ವಸಂತ ಬಂಗೇರ: ಸಭೆಯಿಂದ ಹೊರಹೋದ ಪತ್ರಕರ್ತರು…!

ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಬಹಿರಂಗವಾಗಿ ಅಸಮಧಾನ ವ್ಯಕ್ತಪಡಿಸಿದ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ವಸಂತ ಬಂಗೇರ ಹಾಗೂ ಕಾರ್ಯಕರ್ತರು ಅವರ ಭಾಷಣಕ್ಕೆ ಅಡ್ಡಿ ಪಡಿಸಿದ ಘಟನೆ ಜೂ.05ರಂದು ನಡೆದಿದೆ.

ಕಾರ್ಯಕ್ರಮದಲ್ಲಿ ಕಾರ್ಯಕರ್ತರಿಗೆ ಅನಿಸಿಕೆ ಹೇಳಲು ಅವಕಾಶ ನೀಡಿದಾಗ ಖಲಂದರ್ ಕೊಕ್ಕಡ ಎಂಬವರು ಮಾತನಾಡಿ, ಚುನಾವಣೆಯಲ್ಲಿ ನಾವು ಸೋತು ಗೆದ್ದಿದ್ದೇವೆ. ಆದರೆ 241 ಬೂತುಗಳಿಗೆ ಪ್ರತಿಯೊಂದು ಮನೆಗೂ ಗ್ಯಾರಂಟಿ ಕಾರ್ಡ್ ತಲುಪಿದಾ..? ಅನೇಕ ಮನೆಗಳಿಗೆ ಇನ್ನೂ ತಲುಪಿಲ್ಲ, ಚುನಾವಣೆ ಎಂದರೆ ಹಣಕಾಸಿನ ವ್ಯವಸ್ಥೆ ಬೇಕೇ, ಬೇಕು, ಹೀಗಾಗಿ 241 ಬೂತುಗಳಿಗೆ ನೀಡಿದ ಸವಲತ್ತು, ಸಮರ್ಪಕವಾಗಿ ಬಳಕೆಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರತಿಯೊಂದು ಬೂತಿನಲ್ಲಿ ಹಣ ಸದ್ಬಳಕೆ ಆಗಿಲ್ಲ, ಕೆಲವೊಂದು ನಾಯಕರು ಬಳಿ ಹಣ ಬಾಕಿಯಾಗಿ, ಸಮರ್ಪಕವಾಗಿ ನಿರ್ವಹಣೆ ಆಗಿಲ್ಲ, ಅದಲ್ಲದೆ ಜಿ.ಪಂ ಸಂಯೋಜಕರು, ತಾ.ಪಂ ಉಸ್ತುವಾರಿಗಳು ಇದ್ದಾರೆ ಎಷ್ಟು ಗ್ರಾಮಗಳಿಗೆ ಭೇಟಿ ನೀಡಿದ್ದಾರೆ ಎಂದು ಹೇಳಿ. ಜಿ.ಪಂ ಸಂಯೋಜಕರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದರು. ಈ ವೇಳೆ ಮಾಜಿ ಶಾಸಕ ವಸಂತ ಬಂಗೇರ ಅವರನ್ನು ಗದರಿಸಿ ತಡೆದಿದ್ದಾರೆ.

ಕಾರ್ಯಕ್ರಮದಿಂದ ಹೊರನಡೆದ ಪತ್ರಕರ್ತರು..!

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ಮಾತನಾಡಿ ಕಾಂಗ್ರೆಸ್‌ನ ಕಾರ್ಯಕ್ರಮಕ್ಕೆ ಪ್ರಚಾರ ನೀಡುತ್ತಿಲ್ಲ, ಬಿಜೆಪಿ ಕಾರ್ಯಕ್ರಮಗಳನ್ನು ಹೈಲೆಟ್ ಮಾಡುತ್ತಿದ್ದೀರಿ ಎಂದು ಪ್ರತಿ ಭಾರಿಯಂತೆ ಈ ಸಭೆಯಲ್ಲಿಯೂ ಪತ್ರಕರ್ತರನ್ನು ತರಾಟೆಗೆ ತೆಗೆದುಕೊಂಡರು. ಪತ್ರಕರ್ತರನ್ನು ಕೇಳುವ ಹಕ್ಕು ನನಗಿದೆ ಎಂದು ಹೇಳಿ, ಗೂಬೆ ಕೂರಿಸಲು ಯತ್ನಿಸಿದಾಗ ಅಸಮಾಧಾನಗೊಂಡ ಪತ್ರಕರ್ತರು, ಮಾಧ್ಯಮದವರು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದಿದ್ದಾರೆ.

ವೇದಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವಾರಂ, ಗ್ರಾಮೀಣ ಘಟಕದ ಅಧ್ಯಕ್ಷ ರಂಜನ್ ಜಿ ಗೌಡ, ಪ್ರಚಾರ ಸಮಿತಿ ಅಧ್ಯಕ್ಷ ಭಗೀರಥ ಜಿ, ಜಿ.ಪಂ. ಮಾಜಿ ಸದಸ್ಯ ರಾಜಶೇಖರ್ ಅಜ್ರಿ, ವಿವಿಧ ಘಟಕಗಳ ಮುಖ್ಯಸ್ಥರಾದ ವಂದನಾ, ನಮಿತಾ, ಸಲೀಂ ಜಿ.ಕೆರೆ, ಓಬಯ್ಯ, ದಯಾನಂದ, ದಿನೇಶ್ , ಸತೀಶ್ ಶೆಟ್ಟಿ, ಅಬ್ದುಲ್ ರಹಿಮಾನ್ ಪಡ್ಪು, ಅನಿಲ್ ಪೈ, ಶೇಖರ್ ಕುಕ್ಕೇಡಿ, ಅಭಿನಂದನ್, ಆಶ್ರಫ್, ಎ.ಸಿ ಮ್ಯಾಥ್ಯು, ರಾಜು ಪೂಜಾರಿ, ಪ್ರಶಾಂತ್ ವೇಗಸ್, ಮನೋಹರ ಇಳಂತಿಲ, ಮೊದಲಾದವರಿದ್ದರು.

error: Content is protected !!