ಬೆಳ್ತಂಗಡಿ : ಬೈಕ್ ಮತ್ತು ಆಕ್ಟಿವಾ ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನಿಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರಿಬ್ಬರು ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಜೂನ್.4 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಬೆಂಗಳೂರಿನಿಂದ ಬೈಕ್ ನಲ್ಲಿ ಬರುತ್ತಿದ್ದಾಗ ಧರ್ಮಸ್ಥಳ ಬಳಿಯ ಕಲ್ಲೇರಿಯಲ್ಲಿ ಅಭಿಲಾಷ್(23) ಎಂಬಾತನ ಬೈಕ್ ಹಾಗೂ ಎದುರಿನಿಂದ ಬರುತ್ತಿದ್ದ ಸ್ಕೂಟರ್ ನಡುವೆ ಅಪಘಾತ ಸಂಭವಿಸಿತ್ತು.
ಈ ವೇಳೆ ಬೈಕ್‌ನಿಂದ ಬಿದ್ದ ಅಭಿಲಾಷ್ ಕೈಗೆ ಗಾಯವಾಗಿತ್ತು. ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದು ಓದ್ದಾಡುತ್ತಿದ್ದ ಅಭಿಲಾಷ್‌ಗೆ ಅದೇ ರಸ್ತೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಎಎಸ್‌ಐ ಹರಿಪ್ರಸಾದ್ ಮತ್ತು ಸಿಬ್ಬಂದಿ ಸುನಿಲ್‌ರವರು ತಕ್ಷಣ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆಯನ್ನು ನೀಡಿ ಬಳಿಕ ನಂತರ ಉಜಿರೆ ಆಸ್ಪತ್ರೆಗೆ ಆಟೋ ರಿಕ್ಷಾದಲ್ಲಿ ದಾಖಲಿಸುವಲ್ಲಿ ಸಹಕರಿಸಿ ಕರ್ತವ್ಯನಿಷ್ಠೆಯ ಜೊತೆಗೆ ಮಾನವೀಯತೆ ಮೆರೆದಿದ್ದಾರೆ.