ಕಾಂಗ್ರೆಸ್ ಮುಖಂಡರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಬರಹ: ಶೇಖರ್ ಲಾಯಿಲ ವಿರುದ್ಧ ಪೊಲೀಸ್ ಠಾಣೆಗೆ ದೂರು:

 

 

ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ಧಿ ಹಾಗೂ ಮಾನಹಾನಿಕಾರಕ ಸುದ್ಧಿಗಳನ್ನು ಹರಡಿ ತೇಜೊವಧೆ ಮಾಡಿದ್ದಾರೆ ಎಂದು ಶೇಖರ್ ಲಾಯಿಲ ವಿರುದ್ದ ಕಾಂಗ್ರೆಸ್ ಮುಖಂಡರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಮೇ 29 ರಂದು ದೂರು ನೀಡಿದ್ದಾರೆ.

ಬೆಳ್ತಂಗಡಿ ಕಾಂಗ್ರೆಸ್ ಬ್ಲಾಕ್ ನಗರ ಸಮಿತಿ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ, ಗ್ರಾಮೀಣ ಅಧ್ಯಕ್ಷ ರಂಜನ್ ಜಿ. ಗೌಡ, ಹಾಗೂ ಯೂತ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್ ಇವರು ಕ್ರಮಕೈಗೊಳ್ಳುವ ಬಗ್ಗೆ ದೂರು ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಶೇಖರ್ ಲಾಯಿಲ ಅವರು ಹರೀಶ್ ಕುಮಾರ್ , ಶೈಲೇಶ್ ಕುಮಾರ್ , ರಂಜನ್ ಗೌಡ,ಗಂಗಾಧರ ಗೌಡ, ಅಭಿನಂದನ್ ಹರೀಶ್ ಕುಮಾರ್ ,ಮಾದಲಾದವರು ರಾತ್ರಿ ವೇಳೆಯಲ್ಲಿ ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡಿದರಿಂದ ಬೆಳ್ತಂಗಡಿ ತಾಲೂಕಿನಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹೀನಾಯ ಸೋಲು ಆಗಿದೆ.ಹರೀಶ್ ಕುಮಾರ್ ಸೇರಿದಂತೆ ಬೆಳ್ತಂಗಡಿ ಬ್ಲಾಕ್ ಅಧ್ಯಕ್ಷರುಗಳು ಸೋಲಿನ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕಿತ್ತು, ನಾಚಿಕೆ, ಮಾನ, ಮರ್ಯಾದೆ, ಇಲ್ಲದೆ ಕುರ್ಚಿಯಲ್ಲಿ ಗಟ್ಟಿಯಾಗಿ ಅಂಟಿಕೊಂಡಿದ್ದಾರೆ ಇದು ದುರಂತ ಎಂದು ಬರೆದಿದ್ದರು. ಈ ಬಗ್ಗೆ ನಾಯಕರುಗಳ ತೇಜೋವದೆ ಮಾಡುತ್ತಿರುವ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದೂರು ನೀಡಿದ್ದಾರೆ.ಈ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

error: Content is protected !!