ಬೆಳ್ತಂಗಡಿ ತಾಲೂಕಿನಲ್ಲಿ ಮುನ್ನಡೆ ಸಾಧಿಸುತ್ತಿರುವ ಹರೀಶ್ ಪೂಂಜ..!: 4 ಸಾವಿರ ಮತಗಳ ಹಿನ್ನಡೆಯಲ್ಲಿ ರಕ್ಷಿತ್ ಶಿವರಾಂ..!: ಇವಿಎಂ ಎಣಿಕೆಯಲ್ಲಿ ಯಾರಿಗೆ ಎಷ್ಟು ಮತ…?

ಬೆಳ್ತಂಗಡಿ: 2023ರ ವಿಧಾನಸಭಾ ಚುನಾವಣೆಯ ಎಣಿಕೆ ಪ್ರಾರಂಭವಾಗಿದ್ದು ಬೆಳ್ತಂಗಡಿ ತಾಲೂಕಿನ ಜನರ ಕುತೂಹಲ ಹೆಚ್ಚಾಗಿದೆ.

ಇಂದು ಬೆಳಗ್ಗಿನಿಂದ ಮಂಗಳೂರಿನ ಸುರತ್ಕಲ್ ಎನ್.ಐ.ಟಿ.ಕೆ. ವಿದ್ಯಾಸಂಸ್ಥೆಯಲ್ಲಿ ಮತ ಎಣಿಕೆ ಆರಂಭವಾಗಿದ್ದು ಮೊದಲ ಸುತ್ತಿನ ಎಣಿಕೆಯಲ್ಲಿ ಹರೀಶ್ ಪೂಂಜ ಮುನ್ನಡೆ ಸಾಧಿಸಿದ್ದಾರೆ. ಈವರೆಗಿನ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ 30,183 ಮತಗಳನ್ನು ಗಳಿಸಿ ಮುಂಚೂಣಿಯಲ್ಲಿದ್ದು, ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ 25,212 ಮತಗಳನ್ನು ಪಡೆದು 2ನೇ ಸ್ಥಾನದಲ್ಲಿದ್ದಾರೆ. ಎಸ್.ಡಿ.ಪಿ ಐ ಪಕ್ಷದ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ 791 ಮತಗಳನ್ನು ಪಡೆದು 3ನೇ ಸ್ಥಾನದಲ್ಲಿದ್ದು, ಜನತಾದಳದ ಪಕ್ಷದ ಅಭ್ಯರ್ಥಿ ಅಶ್ರಫ್ ಅಲಿಕುಂಞಿ ಮುಂಡಾಜೆ 159 , ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಜನಾರ್ದನ ಬಂಗೇರ 90 , ಸರ್ವೋದಯ ಪಕ್ಷದ ಅಭ್ಯರ್ಥಿ ಆದಿತ್ಯನಾರಾಯಣ ಕೊಲ್ಲಾಜೆ 118 , ತುಳುವೆರೆ ಪಕ್ಷದ ಅಭ್ಯರ್ಥಿ ಶೈಲೀಶ್ ಆರ್.ಜೆ 115  ಹಾಗೂ ಸ್ವತಂತ್ರ ಅಭ್ಯರ್ಥಿ ಮಹೇಶ್ ಆಟೋ 59 ಮತಗಳನ್ನು ಪಡೆದಿದ್ದಾರೆ.

ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಮಧ್ಯೆ ಪ್ರಬಲ ಪೈಪೋಟಿ ನಡೆಯುತ್ತಿದ್ದು ಗೆಲುವು ಯಾರ ಪಾಲಾಗಲಿದೆ ಎಂಬುದು ತಾಲೂಕಿನ ಮತದಾರರಲ್ಲಿ ಕ್ಷಣ-ಕ್ಷಣವೂ ಕುತೂಹಲ ಮೂಡಿಸುತ್ತಿದೆ.

6ನೇ ಸುತ್ತಿನ ಎಣಿಕೆಯಲ್ಲಿ ಹರೀಶ್ ಪೂಂಜ, 35,193 ಹಾಗೂ  ರಕ್ಷಿತ್ ಶಿವರಾಂ, 30,043 ಮತಗಳನ್ನು ಪಡೆದಿದ್ದು 5,150 ಮತಗಳ ಮುನ್ನಡೆಯನ್ನು ಬಿಜೆಪಿ ಅಭ್ಯರ್ಥಿ ‌ಕಾಯ್ದುಕೊಂಡಿದ್ದಾರೆ.‌

 

error: Content is protected !!