ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿದ ಮಚ್ಚಿನ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ..!:ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ

ಮಚ್ಚಿನ: ಬಿಜೆಪಿ ಪಕ್ಷದಿಂದ ಬೇಸತ್ತು ಮಚ್ಚಿನ ಗ್ರಾಮದ ಮಾಜಿ ಅಧ್ಯಕ್ಷರೊಬ್ಬರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ.

ಮಚ್ಚಿನ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ, ಕುಲಾಲ್ ಸಮುದಾಯದ ಮುಖಂಡ ಚಂದಪ್ಪ ಕುಲಾಲ್ ಅವರು ಬಹಿರಂಗವಾಗಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ ಮೇ.03ರಂದು ಮಾಜಿ ಶಾಸಕ ಕೆ.ವಸಂತ ಬಂಗೇರರ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಅವರು ‘ಚಂದಪ್ಪ ಕುಲಾಲ್ ಅವರಂತಹ ಪ್ರಮುಖರು ಪಕ್ಷಕ್ಕೆ ಸೇರಿದ್ದು ನಮಗೆ ಬಲ ಬಂದಂತಾಗಿದೆ. ನಮ್ಮ ಗೆಲುವು ಖಚಿತ’ ಎಂದು ವಿಸ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಚಿತ್ರನಟ ವಿಜಯ ರಾಘವೇಂದ್ರ ಪಕ್ಷದ ಮುಖಂಡರಾದ ಸತೀಶ್ ಕಾಶಿಪಟ್ನ ಪ್ರಮೋದ್ ಕುಮಾರ್ ಮಚ್ಚಿನ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಪೆರ್ನಾಂಡೀಸ್,ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

error: Content is protected !!