ಗ್ರಾಮ ಪಂಚಾಯತ್ ಎಸ್ ಡಿಪಿಐ ಸದಸ್ಯೆ ಸೇರಿ ಹಲವು ಮಂದಿ ಕಾಂಗ್ರೆಸ್ ಸೇರ್ಪಡೆ: ಪಕ್ಷದ ಧ್ವಜ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿದ ರಕ್ಷಿತ್ ಶಿವರಾಂ:

 

 

ಬೆಳ್ತಂಗಡಿ:   ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವ ದಿನೇ ದಿನೇ ಹೆಚ್ಚಾಗುತ್ತಿದೆ.
ಮಡಂತ್ಯಾರು ಗ್ರಾಮ ಪಂಚಾಯತ್ ಎಸ್ ಡಿ.ಪಿ. ಐ ಸದಸ್ಯೆ ಪಾರ್ವತಿ ಸೇರಿದಂತೆ  ಕುಕ್ಕಳ ಗ್ರಾಮದ ಗಿರೀಶ್. ಕರುಣಾಕರ. ದೀಪಕ್. ಧರ್ಮರಾಜ್. ಪ್ರಭುದೇವ್ ಮುರ್ಗನ್, ಮಂಜುನಾಥ್‌ರವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಿತ್ ಶಿವರಾಂ ರವರು ಪಕ್ಷದ ದ್ವಜ ನೀಡುವ ಮೂಲಕ ಪಕ್ಷಕ್ಕೆ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಜಶೇಖರ್ ಶೆಟ್ಟಿ , ಮಡಂತ್ಯಾರು ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಅರವಿಂದ ಜೈನ್ ,ಮಾಲಾಡಿ ಪಂಚಾಯತ್ ಮಾಜಿ ಅಧ್ಯಕ್ಷರಾದ ಪದ್ಮನಾಭ ಸಾಲಿಯಾನ್,ಸದಸ್ಯರಾದ ಯೋಗಿಶ್ ಕೊಡ್ಲಕ್ಕೆ,ಕುಕ್ಕಳ ಗ್ರಾಮ ಸಮಿತಿಯ ಸದಸ್ಯರಾದ ಯಶೋಧರ ಶೆಟ್ಟಿ ,ಅಬೂಬಕರ್,ಪಕ್ಷದ ಪ್ರಮುಖರಾದ ಆಶೋಕ್ ಉಳಗುಡ್ಡೆ,ರೂಪೇಶ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು

error: Content is protected !!